ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಸಹಿತ ಹಲವಾರು ಮೊಹಲ್ಲಾಗಳ ಖಾಝಿಯಾಗಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಜವಬ್ದಾರಿ ವಹಿಸಿಕೊಂಡರು.
ಕೆ.ಜಿ ಹಳ್ಳಿಯ ಸಿ.ಎಂ.ಎ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಯ್ಯದ್ ಕೂರ ತಂಗಳ್ ಅವರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಖಾಝಿ ಸ್ಥಾನ ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ‘ವಯನಾಡಿನಲ್ಲಿ ನಡೆದ ಪ್ರಕೃತಿ ದುರಂತದ ಬಗ್ಗೆ ಖೇದ ವ್ಯಕ್ತಪಡಿಸಿದರು. ಅಲ್ಲಿನ ದುರಂತದ ನಷ್ಟ ಊಹಿಸಲು ಅಸಾಧ್ಯ. ಅಲ್ಲಿನ ನಿರಾಶ್ರಿತರಿಗೆ ಕೈಲಾಗುವ ಸಹಾಯ ಮಾಡಿ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು, ಮೈಸೂರು, ಕೆ.ಜಿ.ಎಫ್, ಹೊಸೂರು, ರಾಮನಗರ, ತುಮಕೂರು ಮೊದಲಾದ 50ಕ್ಕೂ ಮಿಕ್ಕ ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಉದ್ಘಾಟಿಸಿದರು. ಸಯ್ಯದ್ ತನ್ವೀರ್ ಹಾಶಿಮಿ ಬಿಜಾಪುರ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಶಬೀರ್ ಹಝ್ರತ್, ಉರ್ದು ಅಕಾಡಮಿ ಮುಖ್ಯಸ್ಥ ಮೌಲಾನ ಮುಹಮ್ಮದಲಿ ಖಾಝಿ ಮೊದಲಾದವರು ಮಾತನಾಡಿದರು.
ವಕ್ಫ್ ಬೋರ್ಡ್ ಮುಖ್ಯಸ್ಥ ಅನ್ವರ್ ಪಾಷಾ, ಯು.ಟಿ.ಇಫ್ತಿಕಾರ್, ಮಾಜಿ ಸಚಿವ ರೋಷನ್ ಬೇಗ್, ನಾಸರ್ ಅಹ್ಮದ್ ಎಂ.ಎಲ್.ಸಿ, ಜಿ.ಎ.ಬಾವ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಪಿ.ಎಂ.ಎಚ್.ಅಬ್ದುಲ್ ಹಮೀದ್ ಅಬುದಾಬಿ, ಸಲ್ಮಾನ್ ಪ್ರೆಸಿಡೆನ್ಸಿ, ಸಿ.ಎಂ ಫಾಯಿಝ್, ರಿಯಾಝ್ ಸುಲ್ತಾನ್ ಗೋಲ್ಡ್ ಸೇರಿದಂತೆ ಪ್ರಮುಖ ಧಾರ್ಮಿಕ, ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಿದ್ದರು. ಅನಸ್ ಸಿದ್ದೀಖಿ ಸ್ವಾಗತಿಸಿದರೆ ಹಾಗೂ ಅಬ್ದುಲ್ ರಹ್ಮಾನ್ ಹಾಜಿ ಧನ್ಯವಾದ ಸಮರ್ಪಿಸಿದರು.