ಅಡಿಲೇಡ್: ಭಾರತದ ತಾರಾ ವೇಗಿ ಜಸ್‌ಪ್ರೀತ್ ಬೂಮ್ರಾ ಈ ವರ್ಷ 50 ಟೆಸ್ಟ್ ವಿಕೆಟ್ ಪಡೆದಿದ್ದಾರೆ. 2024ರಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಬೂಮ್ರಾ ಈ ವರ್ಷ 11ನೇ ಟೆಸ್ಟ್ ಆಡುತ್ತಿದ್ದು, ಈ ವರೆಗೂ 15.20ರ ಸರಾಸರಿಯಲ್ಲಿ 50 ವಿಕೆಟ್ ಪಡೆದಿದ್ದಾರೆ.
256.4 ಓವರ್ ಎಸೆದಿರುವ ಅವರು 760 ರನ್ ನೀಡಿದ್ದಾರೆ. 3 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. 2024ರಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರ್.ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ.
11ನೇ ಟೆಸ್ಟ್ ಆಡುತ್ತಿರುವ ಅವರು ಒಟ್ಟು 46 ವಿಕೆಟ್ ಪಡೆದಿದ್ದಾರೆ.ಇನ್ನು, ಕ್ಯಾಲೆಂಡರ್ ವರ್ಷದಲ್ಲಿ 50 ವಿಕೆಟ್ ಕಿತ್ತ ಭಾರತದ 3ನೇ ವೇಗದ ಬೌಲರ್ ಎಂಬ ಖ್ಯಾತಿಗೂ ಬೂಮ್ರಾ ಪಾತ್ರರಾಗಿದ್ದಾರೆ. ಈ ಮೊದಲು ಕಪಿಲ್ ದೇವ್ 1979ರಲ್ಲಿ 74 ವಿಕೆಟ್, 1983ರಲ್ಲಿ 75 ವಿಕೆಟ್ ಪಡೆದಿದ್ದರು. ಜಹೀರ್ ಖಾನ್ 2002ರಲ್ಲಿ 51 ವಿಕೆಟ್ ಕಬಳಿಸಿ, ಈ ಸಾಧನೆ ಮಾಡಿದ 2ನೇ ವೇಗಿ ಎನಿಸಿಕೊಂಡಿದ್ದರು.
ಟೆಸ್ಟ್: ದ.ಆಫ್ರಿಕಾ 358/10, ಶ್ರೀಲಂಕಾ 3 ವಿಕೆಟ್‌ಗೆ 242
ಗೆಬೆರ್ಹಾ: 2ನೇ ಟೆಸ್ಟ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಶ್ರೀಲಂಕಾ ದಿಟ್ಟ ಉತ್ತರ ನೀಡಿದೆ. ದ.ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 358ಕ್ಕೆ ಆಲೌಟಾಯಿತು. ಕೈಲ್ ವೆರೈನ್ ಔಟಾಗದೆ 105 ರನ್ ಗಳಿಸಿದರು. ಲಹಿರು ಕುಮಾರ 4 ವಿಕೆಟ್ ಕಿತ್ತರು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಲಂಕಾ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 242 ರನ್ ಗಳಿಸಿದ್ದು, ಇನ್ನು 116 ರನ್ ಹಿನ್ನಡೆಯಲ್ಲಿದೆ. ಪಥುಂ ನಿಸ್ಸಾಂಕ 89, ದಿನೇಶ್ ಚಾಂಡಿಮಾಲ್ 44, ಮ್ಯಾಥ್ಯೂಸ್ ಔಟಾಗದೆ 40 ರನ್ ಗಳಿಸಿದ್ದಾರೆ.