2024-25ರ ರಣಜಿ ಟ್ರೋಫಿಯಲ್ಲಿ ಸ್ಮರಣ್‌ ದ್ವಿಶತಕ : ಇನ್ನಿಂಗ್ಸ್‌ ಜಯದತ್ತ ಕರ್ನಾಟಕ

KannadaprabhaNewsNetwork |  
Published : Jan 25, 2025, 01:03 AM ISTUpdated : Jan 25, 2025, 08:46 AM IST
ದ್ವಿಶತಕ ಬಾರಿಸಿದ ಸಂಭ್ರಮದಲ್ಲಿ ಕರ್ನಾಟಕದ ಯುವ ಬ್ಯಾಟರ್‌ ಆರ್‌.ಸ್ಮರಣ್‌.  | Kannada Prabha

ಸಾರಾಂಶ

2024-25ರ ರಣಜಿ ಟ್ರೋಫಿಯಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕರ್ನಾಟಕ ಸಕಲ ಪ್ರಯತ್ನ ನಡೆಸುತ್ತಿದೆ. 

 ಬೆಂಗಳೂರು : 2024-25ರ ರಣಜಿ ಟ್ರೋಫಿಯಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕರ್ನಾಟಕ ಸಕಲ ಪ್ರಯತ್ನ ನಡೆಸುತ್ತಿದೆ. ಇಲ್ಲಿ ನಡೆಯುತ್ತಿರುವ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌.ಸ್ಮರಣ್‌ ಅಮೋಘ ದ್ವಿಶತಕ ಬಾರಿಸಿದ್ದು, ರಾಜ್ಯ ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಇನ್ನಿಂಗ್ಸ್‌ ಗೆಲುವಿನ ನಿರೀಕ್ಷೆ ಮೂಡಿಸಿದ್ದಾರೆ.

ಮೊದಲ ದಿನ ಪಂಜಾಬ್‌ ತಂಡವನ್ನು ಮೊದಲ ಇನ್ನಿಂಗ್ಸಲ್ಲಿ ಕೇವಲ 55 ರನ್‌ಗೆ ಆಲೌಟ್‌ ಮಾಡಿ, ದಿನದಂತ್ಯಕ್ಕೆ 4 ವಿಕೆಟ್‌ಗೆ 199 ರನ್‌ ಗಳಿಸಿದ್ದ ಕರ್ನಾಟಕ, 2ನೇ ದಿನ ಆಕರ್ಷಕ ಬ್ಯಾಟಿಂಗ್‌ ಮುಂದುವರಿಸಿತು. 122.1 ಓವರ್‌ ಬ್ಯಾಟ್‌ ಮಾಡಿದ ರಾಜ್ಯ ತಂಡ 475 ರನ್‌ಗೆ ಆಲೌಟ್‌ ಆಗಿ 420 ರನ್‌ಗಳ ಮುನ್ನಡೆ ಪಡೆಯಿತು.

ಬೃಹತ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌, 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 24 ರನ್‌ ಗಳಿಸಿದ್ದು, ಇನ್ನೂ 396 ರನ್‌ ಹಿನ್ನಡೆಯಲ್ಲಿದೆ. 7 ರನ್‌ ಗಳಿಸಿರುವ ಶುಭ್‌ಮನ್‌ ಗಿಲ್‌ ಕ್ರೀಸ್‌ ಕಾಯ್ದುಕೊಂಡಿದ್ದು, ಅವರ ಮೇಲೆ ಭಾರಿ ಒತ್ತಡವಿದೆ.ಸ್ಮರಣೀಯ ಆಟ: ಆರ್‌. ಸ್ಮರಣ್‌ ಸುಲಲಿತವಾಗಿ ಬ್ಯಾಟ್‌ ಬೀಸಿ ನಿರಾಯಾಸವಾಗಿ ರನ್‌ ಕಲೆಹಾಕಿದರೆ, ಅಭಿನವ್‌ ಮನೋಹರ್‌ (34), ಶ್ರೇಯಸ್‌ ಗೋಪಾಲ್‌ (31), ಯಶೋವರ್ಧನ್‌(26) ರಿಂದ ಎಡಗೈ ಬ್ಯಾಟರ್‌ಗೆ ಉತ್ತಮ ಬೆಂಬಲ ದೊರೆಯಿತು. ತಮ್ಮ ಇನ್ನಿಂಗ್ಸನ್ನು ಶತಕಕ್ಕೆ ಸೀಮಿತಗೊಳಿಸದ ಸ್ಮರಣ್‌, ದ್ವಿಶತಕ ತಲುಪಿ ಸಂಭ್ರಮದ ಅಲೆಯಲ್ಲಿ ತೇಲಿದರು.

277 ಎಸೆತಗಳಲ್ಲಿ 25 ಬೌಂಡರಿ, 3 ಸಿಕ್ಸರ್‌ನೊಂದಿಗೆ 203 ರನ್‌ ಗಳಿಸಿ ಔಟಾಗುವ ವೇಳೆಗೆ ತಂಡದ ಮೊತ್ತ 400 ರನ್‌ ದಾಟಿತ್ತು. ಪ್ರಸಿದ್ಧ್‌ ಕೃಷ್ಣ 30, ಕೌಶಿಕ್‌ ಔಟಾಗದೆ 10, ಅಭಿಲಾಷ್‌ 12 ರನ್‌ ಕಲೆಹಾಕಿ ತಂಡದ ಮೊತ್ತವನ್ನು 475ಕ್ಕೆ ಹೆಚ್ಚಿಸಿದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಭಾರತ 5-0 ಸರಣಿ ಕ್ಲೀನ್‌ ಸ್ವೀಪ್‌! - ಶ್ರೀಲಂಕಾ ವಿರುದ್ಧ 5ನೇ ಟಿ20 ಪಂದ್ಯದಲ್ಲಿ 15 ರನ್‌ ಗೆಲುವು
ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ