ಭಾರತ ‘ಎ’ ತಂಡದಲ್ಲಿ ಕರುಣ್‌ ನಾಯರ್‌ಗೆ ಸ್ಥಾನ

KannadaprabhaNewsNetwork |  
Published : May 17, 2025, 02:34 AM ISTUpdated : May 17, 2025, 05:00 AM IST
ಕರುಣ್‌ ನಾಯರ್  | Kannada Prabha

ಸಾರಾಂಶ

ಮೇ 30ರಿಂದ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆರಂಭಗೊಳ್ಳಲಿರುವ 2 ಪಂದ್ಯಗಳ ಸರಣಿಗೆ ಶುಕ್ರವಾರ ಭಾರತ ‘ಎ’ ತಂಡ ಪ್ರಕಟಗೊಂಡಿತು. ತಂಡದಲ್ಲಿ ಕರ್ನಾಟಕದ ಕರುಣ್‌ ನಾಯರ್‌ಗೆ ಸ್ಥಾನ ನೀಡಲಾಗಿದೆ.

ನವದೆಹಲಿ: ಮೇ 30ರಿಂದ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆರಂಭಗೊಳ್ಳಲಿರುವ 2 ಪಂದ್ಯಗಳ ಸರಣಿಗೆ ಶುಕ್ರವಾರ ಭಾರತ ‘ಎ’ ತಂಡ ಪ್ರಕಟಗೊಂಡಿತು. ತಂಡದಲ್ಲಿ ಕರ್ನಾಟಕದ ಕರುಣ್‌ ನಾಯರ್‌ಗೆ ಸ್ಥಾನ ನೀಡಲಾಗಿದೆ. ಐಪಿಎಲ್‌ ಫೈನಲ್‌ ಮೇ 25ರಿಂದ ಜೂ.3ಕ್ಕೆ ಮುಂದೂಡಲ್ಪಟ್ಟರೂ, ಪೂರ್ವ ನಿಗದಿಯಂತೆ ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಭಾರತ ‘ಎ’ ತಂಡದಲ್ಲಿ ಈಗಾಗಲೇ ಐಪಿಎಲ್‌ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ಹಲವು ಆಟಗಾರರಿದ್ದು, ಅವರು ಮೊದಲ ಪಂದ್ಯದಲ್ಲಿ ಆಡಲಿದ್ದಾರೆ. ಭಾರತದ ಮುಂದಿನ ಟೆಸ್ಟ್‌ ನಾಯಕನಾಗಿ ನೇಮಕಗೊಳ್ಳಲಿದ್ದಾರೇ ಎಂದೇ ಹೇಳಲಾಗುತ್ತಿರುವ ಶುಭ್‌ಮನ್‌ ಗಿಲ್‌ ಹಾಗೂ ಭಾರೀ ನಿರೀಕ್ಷೆ ಮೂಡಿಸಿರುವ ಸಾಯಿ ಸುದರ್ಶನ್‌ 2ನೇ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

 ಉಳಿದಂತೆ ತಂಡದಲ್ಲಿ ಭಾರತ ಟೆಸ್ಟ್‌ ತಂಡದ ಕಾಯಂ ಸದಸ್ಯರಾದ ಯಶಸ್ವಿ ಜೈಸ್ವಾಲ್‌, ನಿತೀಶ್‌ ರೆಡ್ಡಿ, ಧೃವ್‌ ಜುರೆಲ್‌ಗೆ ಸ್ಥಾನ ನೀಡಲಾಗಿದೆ. ತಂಡ: ಅಭಿಮನ್ಯು ಈಶ್ವರನ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಕರುಣ್‌ ನಾಯರ್‌, ಧೃವ್‌ ಜುರೆಲ್‌, ನಿತೀಶ್‌ ರೆಡ್ಡಿ, ಶಾರ್ದೂಲ್‌ ಠಾಕೂರ್‌, ಇಶಾನ್‌ ಕಿಶನ್‌, ಮಾನವ್‌ ಸುಥಾರ್‌, ತನುಷ್‌ ಕೋಟ್ಯಾನ್‌, ಮುಕೇಶ್‌ ಕುಮಾರ್‌, ಆಕಾಶ್‌ ದೀಪ್‌, ಹರ್ಷಿತ್‌ ರಾಣಾ, ಅನ್ಶುಲ್‌ ಕಾಂಬೋಜ್‌, ಖಲೀಲ್‌ ಅಹ್ಮದ್‌, ಋತುರಾಜ್‌ ಗಾಯಕ್ವಾಡ್‌, ಸರ್ಫರಾಜ್‌ ಖಾನ್‌, ತುಷಾರ್‌ ದೇಶಪಾಂಡೆ, ಹರ್ಷ್‌ ದುಬೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!