ಇಂದು ಮುಂಬೈ vs ಹೈದ್ರಬಾದ್‌ - ವಾಂಖೆಡೆಯಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆ

Published : Apr 17, 2025, 07:40 AM IST
MUMBAI INDIANS

ಸಾರಾಂಶ

18ನೇ ಆವೃತ್ತಿ ಐಪಿಎಲ್‌ನ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಪರಸ್ಪರ ಸೆಣಸಾಡಲಿವೆ.

 ಮುಂಬೈ: 18ನೇ ಆವೃತ್ತಿ ಐಪಿಎಲ್‌ನ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಪರಸ್ಪರ ಸೆಣಸಾಡಲಿವೆ.

ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಸತತ 4 ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದೆ. ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 246 ರನ್‌ ಗುರಿಯನ್ನು ಬೆನ್ನತ್ತಿ ಜಯಗಳಿಸಿತ್ತು. ಮತ್ತೊಂದೆಡೆ ಮುಂಬೈ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದೆ. ಹೀಗಾಗಿ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯ.

ಆರಂಭದಲ್ಲಿ ಮುಗ್ಗರಿಸಿದ್ದ ಸನ್‌ರೈಸರ್ಸ್ ಬ್ಯಾಟರ್‌ಗಳು ಮತ್ತೆ ಲಯ ಕಂಡುಕೊಂಡಿದ್ದು, ವಾಂಖೆಡೆಯಲ್ಲೂ ರನ್‌ ಹೊಳೆ ಹರಿಸುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಮುಂಬೈ ತಂಡ ಬೌಲಿಂಗ್‌ನಲ್ಲಿ ಮೊನಚು ಕಳೆದುಕೊಂಡಿದೆ. ಬೂಮ್ರಾ ಕೂಡಾ ದುಬಾರಿಯಾಗುತ್ತಿರುವುದು ತಂಡದ ಆತಂಕ ಹೆಚ್ಚಿಸಿದೆ. ಅಸ್ಥಿರ ಆಟವಾಡುತ್ತಿರುವ ರೋಹಿತ್‌ ಶರ್ಮಾ, ಸೂರ್ಯಕುಮಾರ್‌ರಿಂದ ತಂಡ ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ.

ಪಂದ್ಯ: ಸಂಜೆ 7.30ಕ್ಕೆ

PREV

Recommended Stories

ಆತ್ಮಸ್ಥೈರ್ಯ, ಛಲದ ‘ಟೆಸ್ಟ್‌’ ಗೆದ್ದ ಭಾರತ: ಸ್ಟಾರ್‌ಗಳಿಲ್ಲದೆ ಯಂಗ್‌ ಇಂಡಿಯಾ ಅಭೂತಪೂರ್ವ ಸಾಧನೆ
5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು