ನೀರಜ್‌ ಮುಡಿಗೆ ‘ಡೈಮಂಡ್‌’ ಕಿರೀಟ : 88.16 ಮೀ. ದೂರ ಜಾವೆಲಿನ್‌ ಎಸೆದ ಚೋಪ್ರಾ

Published : Jun 22, 2025, 08:03 AM IST
Neeraj Chopra

ಸಾರಾಂಶ

2 ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2 ವರ್ಷಗಳ ಬಳಿಕ ಡೈಮಂಡ್‌ ಲೀಗ್‌ ಕಿರೀಟ ಗೆದ್ದಿದ್ದಾರೆ.

 ಪ್ಯಾರಿಸ್‌: 2 ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2 ವರ್ಷಗಳ ಬಳಿಕ ಡೈಮಂಡ್‌ ಲೀಗ್‌ ಕಿರೀಟ ಗೆದ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿ ನಡೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ 27 ವರ್ಷದ ನೀರಜ್‌ ಮೊದಲ ಪ್ರಯತ್ನದಲ್ಲೇ 88.13 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನಿಯಾದರು.

2ನೇ ಪ್ರಯತ್ನದಲ್ಲಿ 85.10 ಮೀ. ದಾಖಲಿಸಿದ ನೀರಜ್, ಮುಂದಿನ 3 ಪ್ರಯತ್ನಗಳಲ್ಲಿ ಫೌಲ್‌ ಮಾಡಿದರು. 6ನೇ ಎಸೆತದಲ್ಲಿ 82.89 ಮೀಟರ್‌ ದಾಖಲಿಸಿದರು. ಅವರಿಗೆ ಕಠಿಣ ಸ್ಪರ್ಧೆ ನೀಡಿದ ಜರ್ಮನಿಯ ಜೂಲಿಯನ್‌ ವೆಬೆರ್‌ 87.88 ಮೀಟರ್‌ನೊಂದಿಗೆ 2ನೇ ಸ್ಥಾನಿಯಾದರೆ, ಬ್ರೆಜಿಲ್‌ನ ಲೂಯಿಸ್‌ ಮೌರಿಸಿಯೊ ಡ ಸಿಲ್ವ(86.62 ಮೀ.) 3ನೇ ಸ್ಥಾನ ಪಡೆದುಕೊಂಡರು.

ಇತ್ತೀಚೆಗೆ ನಡೆದ ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ 90 ಮೀ. ಗುರಿ ದಾಟಿದ್ದರು. 90.23 ಮೀಟರ್‌ ಎಸೆದಿದ್ದ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ವೆಬೆರ್ 91.06 ಮೀ. ದಾಖಲಿಸಿ ಅಗ್ರಸ್ಥಾನಿಯಾಗಿದ್ದರು. ಈ ಬಾರಿ ವೆಬೆರ್‌ರನ್ನು ಹಿಂದಿಕ್ಕಿ ನೀರಜ್‌ ಕಿರೀಟ ಗೆದ್ದಿದ್ದಾರೆ.

2 ವರ್ಷಗಳ ಬಳಿಕ

ಡೈಮಂಡ್‌ ಕಿರೀಟ

ನೀರಜ್‌ ಈ ಹಿಂದೆ ಡೈಮಂಡ್‌ ಲೀಗ್‌ ಗೆದ್ದಿದ್ದು 2023ರ ಜೂನ್‌ನಲ್ಲಿ. ಅವರು ಸ್ವಿಜರ್‌ಲೆಂಡ್‌ನ ಲಾಸನ್‌ ಲೀಗ್‌ನಲ್ಲಿ ಕೊನೆ ಬಾರಿ ಕಿರೀಟ ಗೆದ್ದಿದ್ದರು. ಆ ಬಳಿಕ ನಡೆದ 6 ಡೈಮಂಡ್‌ ಲೀಗ್‌ ಸ್ಪರ್ಧೆಗಳಲ್ಲಿ 2ನೇ ಸ್ಥಾನಿಯಾಗಿದ್ದರು. ಅಲ್ಲದೆ, ಪ್ಯಾರಿಸ್‌ ಲೀಗ್‌ನಲ್ಲಿದು ನೀರಜ್‌ಗೆ ಮೊದಲ ಜಯ. 2017ರಲ್ಲಿ ಅವರು 5ನೇ ಸ್ಥಾನಿಯಾಗಿದ್ದರು.

PREV
Read more Articles on

Recommended Stories

ಆಯ್ಕೆ ಸಮಿತಿಗೆ ಹೊಸ ಸದಸ್ಯರ ಹುಡುಕಾಟ ಆರಂಭಿಸಿದ ಬಿಸಿಸಿಐ
ಹಂದಿ ಮಾಂಸ ಸೇವನೆ ಭಾರಿ ಹೆಚ್ಚಳ : ಜಗತ್ತಿನಾದ್ಯಂತ ಶುರುವಾಗಿದೆ ಶಟಲ್‌ಕಾಕ್‌ ಬರ!