ಐಪಿಎಲ್‌ ಫೈನಲಲ್ಲಿ ನಾಳೆ ಆರ್‌ಸಿಬಿ vs ಪಂಜಾಬ್

Published : Jun 02, 2025, 11:30 AM IST
virat kohli rcb

ಸಾರಾಂಶ

ಕ್ವಾಲಿಫೈಯರ್‌-2ರಲ್ಲಿ ಮುಂಬೈ ವಿರುದ್ಧ 0 ವಿಕೆಟ್‌ ಗೆದ್ದ ಪಂಜಾಬ್‌ । ನಾಳೆ ಫೈನಲ್‌ ಹಣಾಹಣಿ

ಅಹಮದಾಬಾದ್‌: 18ನೇ ಆವೃತ್ತಿ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಎದುರಾಳಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾನುವಾರ ಕ್ವಾಲಿಫೈಯರ್‌-2 ಪಂದ್ಯದಲ್ಲಿ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ನ ಸೋಲಿಸಿದ ಪಂಜಾಬ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಮುಂಬೈ ತಂಡದ 7ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು. ಪಂಜಾಬ್‌ 2ನೇ ಬಾರಿ ಫೈನಲ್‌ ತಲುಪಿತು.

ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ 6 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಪ್ಲೇ-ಆಫ್‌ನಂತಹ ಒತ್ತಡದ ಪಂದ್ಯದಲ್ಲಿ ಇದು ಬೃಹತ್‌ ಮೊತ್ತ. ಆದರೆ ಅತ್ಯಾಕರ್ಷಕ ಬ್ಯಾಟಿಂಗ್‌ ಪ್ರದರ್ಶಿಸಿದ ಪಂಜಾಬ್‌ -00 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಪ್ರಭ್‌ಸಿಮ್ರನ್‌(6), ಪ್ರಿಯಾನ್ಶ್‌ ಆರ್ಯ(20) ಮಿಂಚಲಿಲ್ಲ. ಬೂಮ್ರಾರ ಮೊದಲ ಓವರ್‌ನಲ್ಲಿ 20 ರನ್‌ ಚಚ್ಚಿದ ಜೋಶ್‌ ಇಂಗ್ಲಿಸ್‌ 21 ಎಸೆತಕ್ಕೆ 38 ರನ್‌ ಗಳಿಸಿ ಔಟಾದರು. ಬಳಿಕ ಇನ್ನಿಂಗ್ಸ್‌ ಕಟ್ಟಿದ್ದು ಶ್ರೇಯಸ್‌ ಹಾಗೂ ನೇಹಲ್‌ ವಧೇರಾ. ರೀಸ್‌ ಟಾಪ್ಲಿ ಎಸೆದ 13ನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಶ್ರೇಯಸ್‌, ಪಂದ್ಯದ ಗತಿ ಬದಲಿಸಿದರು. 16ನೇ ಓವರ್‌ನಲ್ಲಿ ನೇಹಲ್‌ ವಧೇರಾ(29 ಎಸೆತಕ್ಕೆ 48) ಔಟಾದ ಬಳಿಕ, ಶ್ರೇಯಸ್‌(00 ಎಸೆತಕ್ಕೆ 000) ತಂಡವನ್ನು ಗೆಲ್ಲಿಸಿದರು.

ಉತ್ತಮ ಬ್ಯಾಟಿಂಗ್‌: ಇದಕ್ಕೂ ಮುನ್ನ ಮುಂಬೈ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡದ ಯಾರೊಬ್ಬರೂ ಅರ್ಧಶತಕ ಬಾರಿಸದಿದ್ದರೂ, 200ರ ಗಡಿ ದಾಟಿತು. ಸೂರ್ಯಕುಮಾರ್‌ 26 ಎಸೆತಕ್ಕೆ 44, ತಿಲಕ್‌ ವರ್ಮಾ 29 ಎಸೆತಕ್ಕೆ 44, ಬೇರ್‌ಸ್ಟೋವ್‌ 24 ಎಸೆತಕ್ಕೆ 38, ನಮನ್‌ಧೀರ್‌ 18 ಎಸೆತಕ್ಕೆ 37 ರನ್‌ ಸಿಡಿಸಿದರು.

ಸ್ಕೋರ್: ಮುಂಬೈ 20 ಓವರಲ್ಲಿ 203/6 (ಸೂರ್ಯ 44, ತಿಲಕ್‌ 44, ಅಜ್ಮತುಲ್ಲಾ 2-43), ಪಂಜಾಬ್‌ 00 ಓವರಲ್ಲಿ 00 (ಶ್ರೇಯಸ್‌ 00, ನೇಹಲ್‌ 48, ಅಶ್ವನಿ 000)

7ನೇ ಬಾರಿ ಮುಂಬೈ ಫೈನಲ್‌ ಪ್ರವೇಶ!

ಮುಂಬೈ ತಂಡ 7ನೇ ಬಾರಿ ಫೈನಲ್‌ಗೇರಿದೆ. ತಂಡ ಈ ಮೊದಲು 2010ರಲ್ಲಿ ರನ್ನರ್‌-ಅಪ್‌ ಆಗಿದ್ದರೆ, 2013, 2015, 2017, 2019 ಹಾಗೂ 2020ರಲ್ಲಿ ಟ್ರೋಫಿ ಗೆದ್ದಿದೆ. ಈ ಬಾರಿ ಮತ್ತೊಂದು ಟ್ರೋಫಿ ಗೆದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್‌ ಆದ ತಂಡ ಎನಿಸಿಕೊಳ್ಳುವ ಕಾತರದಲ್ಲಿದೆ.

11 ವರ್ಷಗಳ ಬಳಿಕ ಪಂಜಾಬ್‌ಗೆ ಫೈನಲ್‌ಗೆ

ಪಂಜಾಬ್‌ ಐಪಿಎಲ್‌ನಲ್ಲಿ 11 ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿತು. ತಂಡಕ್ಕಿದು ಒಟ್ಟಾರೆ 2ನೇ ಫೈನಲ್‌. 2014ರಲ್ಲಿ ಫೈನಲ್‌ಗೇರಿದ್ದ ತಂಡ ಕೋಲ್ಕತಾ ವಿರುದ್ಧ ಸೋತು ರನ್ನರ್‌-ಅಪ್‌ ಆಗಿತ್ತು.

PREV
Read more Articles on

Recommended Stories

ಕೊನೆರು ಹಂಪಿ vs ದಿವ್ಯಾ: ಚೆಸ್‌ ವಿಶ್ವಕಪ್‌ ಕಿರೀಟ ಗೆಲ್ಲೋರ್‍ಯಾರು?
ಮ್ಯಾಂಚೆಸ್ಟರಲ್ಲಿ ಭಾರತದ ಬೆಂಡೆತ್ತಿದ ಇಂಗ್ಲೆಂಡ್‌!