ಕನ್ನಡಪ್ರಭ ವಾರ್ತೆ ಬೆಂಗಳೂರು
ಡಬಲ್ಸ್ ವಿಶ್ವ ನಂ.1, ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದ ಖ್ಯಾತ ಟೆನಿಸಿಗ ರೋಹನ್ ಬೋಪಣ್ಣ ಅವರಿಗೆ ಸೋಮವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್‌ಟಿಎ) ವತಿಯಿಂದ ಸನ್ಮಾನ ಮಾಡಲಾಯಿತು.
ಈ ವೇಳೆ ಅವರ ಡಬಲ್ಸ್ ಜತೆಗಾರ, ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗಿರುವ ಭಾವಚಿತ್ರ ಉಡುಗುರೆಯಾಗಿ ನೀಡಲಾಯಿತು.
ಈ ವೇಳೆ ಮಾತನಾಡಿದ ರೋಜನ್ ಬೋಪಣ್ಣ, ನನ್ನನ್ನು ಗೌರವಿಸಿದ್ದಕ್ಕಾಗಿ ನಾನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಈ ಸುದೀರ್ಘ ಪಯಣದಲ್ಲಿ ಸಾಕಷ್ಟು ಕಷ್ಟಗಳು ಇದ್ದವು ಆದರೆ, ನಾನು ಹಿಂಜರಿದಿಲ್ಲ. ನನಗೆ ಅವಕಾಶ ಬರುತ್ತದೆ ಎಂದು ನಾನು ತಿಳಿದಿದ್ದೆ. ನನ್ನ ಪೋಷಕರು ಮತ್ತು ಸಹೋದರಿ ನನಗೆ ಅಪಾರ ಬೆಂಬಲ ನೀಡಿದ್ದಾರೆ.
ನಾನು ಚಿಕ್ಕಂದಿನಿಂದಲೂ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನನ್ನ ಯಶಸ್ಸಿನ ಶ್ರೇಯ ಸಲ್ಲುತ್ತದೆ. ಎಂದರು.
ಬೋಪಣ್ಣ ಅವರು ಕೆಎಸ್ಎಲ್‌ಟಿಎಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ತಮ್ಮ ಸಾಧನೆಗಳಿಂದ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದ್ದಾರೆ.
ಸವಾಲಿನ ATP ಟೂರ್‌ನಲ್ಲಿ ಹೆಚ್ಚಿನ ಆಟಗಾರರು ಉಳಿಸಿಕೊಳ್ಳುವುದು ಕಷ್ಟಕರವಾದ ವಯಸ್ಸಿನಲ್ಲಿ, ಅವರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ.
ಅವರು ಖಂಡಿತವಾಗಿಯೂ ಭಾರತೀಯ ಟೆನಿಸ್ ಅನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಮಹೇಶ್ವರ್ ರಾವ್ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ಕೆಎಸ್ಎಲ್‌ಟಿಎ ಗೌರವ ಕಾರ್ಯದರ್ಶಿ ಮಹೇಶ್ವರ್ ರಾವ್, ಪ್ಯಾರಾ ಅಥ್ಲೀಟ್ ಕೆ.ವೈ.ವೆಂಕಟೇಶ್, ಮಾಜಿ ಟೆನಿಸ್ ಆಟಗಾರ ಶ್ರೀನಾಥ್ ಪ್ರಹ್ಲಾದ್.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರಮೀಳಾ ಅಯ್ಯಪ್ಪ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಟೂರ್ನಮೆಂಟ್ ನಿರ್ದೇಶಕ ಸುನಿಲ್ ಯಜಮಾನ್ ಸೇರಿಂದತೆ ಇನ್ನಿತರಿರದ್ದರು.