4ನೇ ಟೆಸ್ಟ್‌ ಬಳಿಕ ನಿವೃತ್ತಿಗೆ ನಿರ್ಧರಿಸಿದ್ದ ರೋಹಿತ್‌: ಹಿತೈಷಿಗಳ ಒತ್ತಾಯ ಬಳಿಕ ಹಿಂದಕ್ಕೆ!

KannadaprabhaNewsNetwork |  
Published : Jan 12, 2025, 01:18 AM ISTUpdated : Jan 12, 2025, 04:10 AM IST
ರೋಹಿತ್‌ ಶರ್ಮಾ | Kannada Prabha

ಸಾರಾಂಶ

ರೋಹಿತ್‌ ವಿಚಾರದಲ್ಲಿ ಕೋಚ್‌ ಗೌತಮ್‌ ಗಂಭೀರ್‌ ತೀವ್ರ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.

ನವದೆಹಲಿ: ಭಾರತದ ನಾಯಕ ರೋಹಿತ್‌ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 4ನೇ ಪಂದ್ಯದ ಬಳಿಕವೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ರೋಹಿತ್‌ ಮೊದಲ ಟೆಸ್ಟ್‌ ಆಡಿರಲಿಲ್ಲ. ಆ ಬಳಿಕ 3 ಪಂದ್ಯದಲ್ಲಿ ಆಡಿದ್ದರೂ, ತೀವ್ರ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮೆಲ್ಬರ್ನ್‌ ಟೆಸ್ಟ್‌ ಬಳಿಕ ರೋಹಿತ್‌ ನಿವೃತ್ತಿ ಬಗ್ಗೆ ಯೋಚಿಸಿದ್ದರು. ಆದರೆ ಅವರ ಹಿತೈಶಿಗಳು ನಿರ್ಧಾರದಿಂದ ಹಿಂದೆ ಸರಿಯುವಂತೆ ರೋಹಿತ್‌ಗೆ ಒತ್ತಾಯಿಸಿದ್ದಾರೆ. ಹೀಗಾಗಿ ರೋಹಿತ್‌ ನಿವೃತ್ತಿ ನಿರ್ಧಾರ ಕೈಬಿಟ್ಟರು ಎಂದು ವರದಿಯಾಗಿದೆ.

ಆದರೆ ಇದರಿಂದ ಕೋಚ್‌ ಗೌತಮ್‌ ಗಂಭೀರ್‌ ತೀವ್ರ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.ಇತ್ತೀಚೆಗಷ್ಟೇ ಸರಣಿ ವೇಳೆ ಡ್ರೆಸ್ಸಿಂಗ್‌ ಕೋಣೆಯಲ್ಲಿ ಹಿರಿಯ ಆಟಗಾರರು, ಕೋಚ್‌ ನಡುವೆ ಭಿನ್ನಮತ ತಲೆದೋರಿದ್ದಾಗಿ ವರದಿಯಾಗಿತ್ತು. ರೋಹಿತ್‌ ಸರಣಿ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಟೆಸ್ಟ್‌ ನಿವೃತ್ತಿ ಸುದ್ದಿಯನ್ನು ರೋಹಿತ್‌ ಅಲ್ಲಗಳೆದಿದ್ದರು.

ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಚೊಚ್ಚಲ ಸರಣಿ ಜಯದ ಗುರಿ

ರಾಜ್‌ಕೋಟ್‌: ಐರ್ಲೆಂಡ್‌ ವಿರುದ್ಧ ಚೊಚ್ಚಲ ದ್ವಿಪಕ್ಷೀಯ ಸರಣಿ ಆಡುತ್ತಿರುವ ಭಾರತ ಮಹಿಳಾ ತಂಡ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶ ಪಡಿಸಿಕೊಳ್ಳುವ ಕಾತರದಲ್ಲಿದೆ. ಪಂದ್ಯಕ್ಕೆ ರಾಜ್‌ಕೋಟ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಭಾರತ 6 ವಿಕೆಟ್‌ ಗೆಲುವು ಸಾಧಿಸಿತ್ತು.

 ನಾಯಕಿ ಸ್ಮೃತಿ ಮಂಧನಾ ಅಭೂತಪೂರ್ವ ಲಯ ಮುಂದುವರಿಸಿದ್ದರೆ, ಯುವ ಆಟಗಾರ್ತಿಯರಾದ ಪ್ರತಿಕಾ ರಾವಲ್‌ ಹಾಗೂ ತೇಜಲ್‌ ಅರ್ಧಶತಕದ ಕೊಡುಗೆ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ ತಂಡದ ಫೀಲ್ಡಿಂಗ್‌ ವಿಭಾಗ ಪದೇ ಪದೇ ತಪ್ಪು ಮಾಡುತ್ತಿದ್ದು, ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ, ಟಿಟಾಸ್‌ ಸಧು, ಸೈಮಾ ಠಾಕೂರ್‌, ಪ್ರಿಯಾ ಮಿಶ್ರಾ ಉತ್ತಮ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದ್ದಾರೆ. ಮತ್ತೊಂದೆಡೆ ಐರ್ಲೆಂಡ್‌ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಬೆಳಗ್ಗೆ 11 ಗಂಟೆಗೆ । ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

PREV

Recommended Stories

5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !