ಅಂತೂ ವಾಂಖೆಡೆಯಲ್ಲಿ ಗೆದ್ದ ಆರ್‌ಸಿಬಿ - 10 ವರ್ಷಗಳ ಬಳಿಕ ಮುಂಬೈ ಕ್ರೀಡಾಂಗಣದಲ್ಲಿ ಜಯ

Published : Apr 08, 2025, 05:38 AM IST
IPL 2025

ಸಾರಾಂಶ

ಕಳೆದ 10 ವರ್ಷಗಳಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿಗೆ ಹಾತೊರೆಯುತ್ತಿದ್ದ ಆರ್‌ಸಿಬಿಗೆ ಕೊನೆಗೂ ಯಶಸ್ಸು ಸಿಕ್ಕಿದೆ. ಸೋಮವಾರ ಮುಂಬೈ ವಿರುದ್ಧ ಆರ್‌ಸಿಬಿ 12 ರನ್ ಗೆಲುವು ಸಾಧಿಸಿತು

 ಮುಂಬೈ: ಕಳೆದ 10 ವರ್ಷಗಳಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿಗೆ ಹಾತೊರೆಯುತ್ತಿದ್ದ ಆರ್‌ಸಿಬಿಗೆ ಕೊನೆಗೂ ಯಶಸ್ಸು ಸಿಕ್ಕಿದೆ. ಸೋಮವಾರ ಮುಂಬೈ ವಿರುದ್ಧ ಆರ್‌ಸಿಬಿ 12 ರನ್ ಗೆಲುವು ಸಾಧಿಸಿತು. ಇದು 2015ರ ಬಳಿಕ ವಾಂಖೆಡೆಯಲ್ಲಿ ಆರ್‌ಸಿಬಿಗೆ ಸಿಕ್ಕ ಮೊದಲ ಜಯ. ಆರ್‌ಸಿಬಿ ಈ ಬಾರಿ ಆಡಿದ 4ರಲ್ಲಿ 3 ಗೆದ್ದರೆ, ಮುಂಬೈ 5ರಲ್ಲಿ 4ನೇ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ಗೆ 221 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 9 ವಿಕೆಟ್‌ಗೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 12 ಓವರಲ್ಲಿ 99 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಸಂಕಷ್ಟದಲ್ಲಿತ್ತು. 8 ಓವರಲ್ಲಿ 123 ರನ್‌ ಬೇಕಿತ್ತು. ತಿಲಕ್‌ 29 ಎಸೆತಕ್ಕೆ 56, ಹಾರ್ದಿಕ್‌ 15 ಎಸೆತಗಳಲ್ಲಿ 42 ರನ್‌ ಗಳಿಸಿ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡರು. ಆದರೆ 18, 19ನೇ ಓವರಲ್ಲಿ 4 ಎಸೆತಗಳ ಅಂತರದಲ್ಲಿ ಇಬ್ಬರೂ ಔಟಾದ ಬಳಿಕ ತಂಡ ಸೋಲಿನತ್ತ ಮುಖಮಾಡಿತು. ಕೊನೆ ಓವರ್‌ಗೆ 19 ರನ್‌ ಬೇಕಿದ್ದಾಗ ತಂಡ ಗೆಲ್ಲಲಿಲ್ಲ.

ಬ್ಯಾಟರ್ಸ್‌ ಅಬ್ಬರ: ಆರ್‌ಸಿಬಿ ಮುಂಬೈನಲ್ಲಿ ಆರಂಭದಲ್ಲೇ ಅಬ್ಬರಿಸಿತು. ವಿರಾಟ್‌ ಕೊಹ್ಲಿ 42 ಎಸೆತಕ್ಕೆ 67, ದೇವದರ್‌ 37 ರನ್‌ ಗಳಿಸಿ ಔಟಾದರೆ, ನಾಯಕ ರಜತ್‌ ಪಾಟೀದಾರ್‌ 32 ಎಸೆತಗಳಲ್ಲಿ 64, ಜಿತೇಶ್‌ ಶರ್ಮಾ 19 ಎಸೆತಕ್ಕೆ ಔಟಾಗದೆ 40 ರನ್‌ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಸ್ಕೋರ್: ಆರ್‌ಸಿಬಿ 221/5 (ಕೊಹ್ಲಿ 67, ರಜತ್‌ 64, ಜಿತೇಶ್‌ 40, ಹಾರ್ದಿಕ್‌ 2-45), ಮುಂಬೈ 209/9 (ತಿಲಕ್‌ 56, ಹಾರ್ದಿಕ್‌ 42, ಕೃನಾಲ್ 4-45)

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!