ಸೋಲಿನ ಸರಪಳಿ ಕಳಚಿ ಗೆದ್ದ ಟೈಟಾನ್ಸ್‌!

KannadaprabhaNewsNetwork |  
Published : Dec 23, 2023, 01:45 AM IST
ಫೋಟೊ: ಟ್ವಿಟರ್‌ | Kannada Prabha

ಸಾರಾಂಶ

ಪವನ್‌ ಶೆರಾವತ್‌ ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರೆ, ಡಿಫೆಂಡರ್‌ಗಳು ಸುಧಾರಿತ ಆಟ ಪ್ರದರ್ಶಿಸಿದರು.

ಚೆನ್ನೈ: ಸತತ 5 ಸೋಲಿನೊಂದಿಗೆ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹೀನಾಯ ಆರಂಭ ಪಡೆದಿದ್ದ ತೆಲುವು ಟೈಟಾನ್ಸ್‌ ಕೊನೆಗೂ ಗೆಲುವಿನ ಸಿಹಿ ಅನುಭವಿಸಿದೆ. ಶುಕ್ರವಾರ ಬಲಿಷ್ಠ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಟೈಟಾನ್ಸ್‌ಗೆ 37-36 ಅಂಕಗಳ ಗೆಲುವು ಲಭಿಸಿತು. ಟೂರ್ನಿಯುದ್ದಕ್ಕೂ ಮಾಡಿದ್ದ ಹಲವು ತಪ್ಪುಗಳನ್ನು ಟೈಟಾನ್ಸ್‌ ಈ ಪಂದ್ಯದಲ್ಲಿ ಪುನರಾವರ್ತಿಸಲಿಲ್ಲ. ಆರಂಭದಲ್ಲೇ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟ ಟೈಟಾನ್ಸ್‌ ಆಟಗಾರರು ಮೊದಲಾರ್ಧಕ್ಕೆ 21-20 ಅಂಕಗಳಿಂದ ಮುನ್ನಡೆ ಸಾಧಿಸಿದರು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡ ಟೈಟಾನ್ಸ್‌, ಯಾವ ಕ್ಷಣದಲ್ಲೂ ಹರ್ಯಾಣಕ್ಕೆ ಹೆಚ್ಚಿನ ಅಂಕ ಗಳಿಸುವ ಅವಕಾಶ ನೀಡಲಿಲ್ಲ. ಪವನ್‌ ಶೆರಾವತ್‌ ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರೆ, ಡಿಫೆಂಡರ್‌ಗಳು ಸುಧಾರಿತ ಆಟ ಪ್ರದರ್ಶಿಸಿದರು. ಪವನ್‌ 21 ರೈಡ್‌ಗಳಲ್ಲಿ 10 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಅಜಿತ್‌ ಪವಾರ್‌ 7, ಸಂದೀಪ್‌ 5 ಟ್ಯಾಕಪ್‌ ಅಂಕ ಪಡೆದರು. ಹರ್ಯಾಣದ ರೈಡರ್‌ಗಳಾದ ಶಿವಂ(12), ವಿನಯ್‌(09) ಹೋರಾಟ ಫಲ ನೀಡಲಿಲ್ಲ.-ಪಾಟ್ನಾಗೆ ಶರಣಾದ ತಮಿಳ್ ತಲೈವಾಸ್‌ ತವರಿನಲ್ಲಿ ಶುಭಾರಂಭ ಮಾಡುವ ತಮಿಳ್‌ ತಲೈವಾಸ್‌ ತಂಡದ ಕನಸು ಭಗ್ನಗೊಂಡಿದೆ. ಶುಕ್ರವಾರ ಪಾಟ್ನಾ ಪೈರೇಟ್ಸ್‌ ವಿರುದ್ಧ ತಲೈವಾಸ್‌ಗೆ 33-46 ಅಂಕಗಳ ಸೋಲು ಎದುರಾಯಿತು. ಇದು ಪಾಟ್ನಾಗೆ ಟೂರ್ನಿಯ 3ನೇ ಗೆಲುವು. ಪಂದ್ಯದ ಆರಂಭದಿಂದಲೂ ಇತ್ತಂಡಗಳು ತೀವ್ರ ಪೈಪೋಟಿ ನಡೆಸಿದ್ದವು. ಮೊದಲಾರ್ಧಕ್ಕೆ ಪಾಟ್ನಾ 21-20ರಲ್ಲಿ ಅಲ್ಪ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪ್ರಾಬಲ್ಯ ಸಾಧಿಸಿದ ಪಾಟ್ನಾ, ತಲೈವಾಸ್‌ಗೆ ಗೆಲುವು ನಿರಾಕರಿಸಿತು. ಸುಧಾಕರ್‌ 11, ಮಂಜೀತ್‌ 8 ರೈಡ್‌ ಅಂಕಗಳನ್ನು ಗಳಿಸಿ ಪಾಟ್ನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.-ಇಂದಿನ ಪಂದ್ಯಗಳುತಮಿಳ್‌ ತಲೈವಾಸ್‌-ಜೈಪುರ, ರಾತ್ರಿ 8ಕ್ಕೆಗುಜರಾತ್‌ ಜೈಂಟ್ಸ್‌-ಯುಪಿ ಯೋಧಾಸ್‌, ರಾತ್ರಿ 9ಕ್ಕೆ-

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ