ಪೋರ್ಷೆ ಅಪಘಾತ: ಅಪ್ರಾಪ್ತನ ಅಜ್ಜನ ಬಂಧನ

| Published : May 26 2024, 01:38 AM IST / Updated: May 26 2024, 04:43 AM IST

ಸಾರಾಂಶ

ಕಳೆದ ಭಾನುವಾರ ಮಧ್ಯರಾತ್ರಿ 2 ಜನರ ಬಲಿಪಡೆದ ಅಪ್ರಾಪ್ತ ಬಾಲಕ ಚಾಲಿತ ಪೋರ್ಷೆ ಕಾರು ಅಪಘಾತ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕುಟುಂಬದ ಕಾರು ಚಾಲಕ ನೀಡಿದ ಹೇಳಿಕೆ ಆಧರಿಸಿ ಅಪ್ರಾಪ್ತನ ಅಜ್ಜನನ್ನು ಬಂಧಿಸಲಾಗಿದೆ.

 ಪುಣೆ:  ಕಳೆದ ಭಾನುವಾರ ಮಧ್ಯರಾತ್ರಿ 2 ಜನರ ಬಲಿಪಡೆದ ಅಪ್ರಾಪ್ತ ಬಾಲಕ ಚಾಲಿತ ಪೋರ್ಷೆ ಕಾರು ಅಪಘಾತ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕುಟುಂಬದ ಕಾರು ಚಾಲಕ ನೀಡಿದ ಹೇಳಿಕೆ ಆಧರಿಸಿ ಅಪ್ರಾಪ್ತನ ಅಜ್ಜನನ್ನು ಬಂಧಿಸಲಾಗಿದೆ.

ಗುರುವಾರ ಪುಣೆ ಪೊಲೀಸರು ಕುಟುಂಬ ಚಾಲಕನ ಹೇಳಿಕೆ ಪಡೆದಿದ್ದು, ಅದರಲ್ಲಿ ಆತ ‘ನನ್ನನ್ನು ಅಪ್ರಾಪ್ತನ ಅಜ್ಜ ಮತ್ತು ತಂದೆ ಮೇ 19 ಮತ್ತು 20ರಂದು ತಮ್ಮ ಬಂಗಲೆಯಲ್ಲಿ ಕೂಡಿ ಹಾಕಿ ಅಪಘಾತದ ಸಮಯದಲ್ಲಿ ತಾನೇ ಕಾರು ಚಲಾವಣೆ ಮಾಡುತ್ತಿದ್ದುದಾಗಿ ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದರು’ ಎಂದು ಹೇಳಿದ್ದಾನೆ.

 ಈ ಹಿನ್ನೆಲೆಯಲ್ಲಿ ಆತನ ಹೇಳಿಕೆ ಆಧಾರದಲ್ಲಿ ಅಪ್ರಾಪ್ತನ ತಂದೆ ಮತ್ತು ಅಜ್ಜನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿರುವ ಪೊಲೀಸರು ಅಜ್ಜನನ್ನು ಬಂಧಿಸಿದ್ದಾರೆ.

ಈ ನಡುವೆ ಸಾವಿಗೀಡಾದ ನವದಂಪತಿಯ ಕುಟುಂಬಸ್ಥರು, ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಲು ಆಗ್ರಹಿಸಿದ್ದಾರೆ.