ಸಾರಾಂಶ
ಮಾರಿಗೋಲ್ಡ್ ಸಿನಿಮಾ ಜನಮೆಚ್ಚುಗೆ ಗಳಿಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ.
ಸಿನಿವಾರ್ತೆ
ದಿಗಂತ್, ಸಂಗೀತಾ ಶೃಂಗೇರಿ ನಟನೆಯ ಕ್ರೈಮ್ ಥ್ರಿಲ್ಲರ್ ‘ಮಾರಿಗೋಲ್ಡ್’ ಸಿನಿಮಾ ವೀಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ರಾಘವೇಂದ್ರ ನಾಯ್ಕ್ ನಿರ್ದೇಶನದ, ರಘುವರ್ಧನ್ ನಿರ್ಮಾಣದ ಈ ಸಿನಿಮಾ ತನ್ನ ಕತೆಯಿಂದ ಮತ್ತು ವಿಶಿಷ್ಟ ಪಾತ್ರಪೋಷಣೆಯಿಂದ ಗಮನ ಸೆಳೆದಿದೆ. ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದಾರೆ. ಸಂಪತ್ ಮೈತ್ರೇಯ, ಸಂಗೀತಾ ಶೃಂಗೇರಿ ಪಾತ್ರ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
‘ಇನ್ನೂ ಹಲವು ಚಿತ್ರಮಂದಿರಗಳಿಂದ ಈ ಚಿತ್ರಕ್ಕೆ ಬೇಡಿಕೆ ಬರುತ್ತಿರುವುದು ನೋಡಿ ಸಂತೋಷವಾಗಿದೆ’ ಎಂದು ನಿರ್ಮಾಪಕ ರಘುವರ್ಧನ್ ತಿಳಿಸಿದ್ದಾರೆ.
ಗೋಲ್ಡ್ ಬಿಸ್ಕೆಟ್ ದರೋಡೆ ಮಾಡುವ ಕತೆಯನ್ನು ಹೊಂದಿರುವ ಈ ಸಿನಿಮಾ ವಿಶಿಷ್ಟ ಸಂದೇಶ ಮತ್ತು ಚಿತ್ರಕತೆಯಿಂದಲೇ ಉತ್ತಮ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.
ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ ಬಲ ರಾಜವಾಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.