ಡಾ ರಾಜ್ ಕುಮಾರ್ ಅವರ 18ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದವರಿಂದ ಪೂಜೆ ಸಲ್ಲಿಸಲಾಯಿತು.

 ಸಿನಿವಾರ್ತೆ

ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ಹಾಗೂ ಕುಟುಂಬದವರಿಂದ ಡಾ.ರಾಜ್‌ಕುಮಾರ್‌ ಅವರ 18ನೇ ವರ್ಷದ ಪುಣ್ಯಸ್ಮರಣೆ ನಡೆಯಿತು.

ಬೆಂಗ‍ಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್‌ ಸ್ಮಾರಕ್ಕೆ ಶುಕ್ರವಾರ ಬೆಳಗ್ಗೆ ರಾಘವೇಂದ್ರ ರಾಜ್‌ಕುಮಾರ್‌, ಮಂಗಳ ದಂಪತಿ ಹಾಗೂ ಪೂರ್ಣಿಮಾ ರಾಜ್‌ಕುಮಾರ್‌ ಪೂಜೆ ಸಲ್ಲಿಸಿದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ಕೂಡ ಪೂಜೆ ಸಲ್ಲಿಸುವ ಮೂಲಕ ಡಾ. ರಾಜ್‌ಕುಮಾರ್‌ ಅವರನ್ನು ನೆನಪು ಮಾಡಿಕೊಂಡರು. ಇದೇ ವೇಳೆ ನಟ ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಗೂ ಪೂಜೆ ಸಲ್ಲಿಸಲಾಯಿತು.