ಸಾರಾಂಶ
ಬೆಂಗಳೂರಿನ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಗಾಂಧಿನಗರ ಎಂಬ ಸಿನಿಮಾ ಮಾಡುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಬೆಂಗಳೂರಿನ ಎನ್ಆರ್ ಫಿಲಂ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ‘ಗಾಂಧಿನಗರ’ ಎಂಬ ಸಿನಿಮಾ ಮಾಡಲಿದ್ದಾರೆ. ಬಾಲಾಜಿ ರಾವ್ ಮುಖ್ಯಪಾತ್ರಧಾರಿ. ಈ ಸಂಸ್ಥೆಯ ವಿದ್ಯಾರ್ಥಿಗಳು ಇತರ ಪಾತ್ರಗಳಲ್ಲಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಎನ್ ಎಚ್ ನಾಗೇಶ್ ರೈತ ಚಿತ್ರದ ನಿರ್ದೇಶಕ. ‘ಗಾಂಧಿನಗರ’ ಎಂಬ ಊರಿನ ವಿದ್ಯಾವಂತ ನಿರುದ್ಯೋಗಿಗಳೇ ಸಿನಿಮಾದ ಹೈಲೈಟ್.