ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಬಾಲಿವುಡ್‌ನಲ್ಲೀಗ ಟ್ರೆಂಡಿಂಗ್‌

| Published : Jun 27 2024, 01:05 AM IST / Updated: Jun 27 2024, 05:22 AM IST

ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಬಾಲಿವುಡ್‌ನಲ್ಲೀಗ ಟ್ರೆಂಡಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಿವುಡ್‌ನಲ್ಲೀಗ ಪ್ರೆಗ್ನೆನ್ಸಿ ವಿತ್ ಹೀಲ್ಸ್‌ ಟ್ರೆಡಿಂಗ್‌ ಆಗ್ತಿದೆ.

  ಸಿನಿವಾರ್ತೆ

ಸದ್ಯ ಬಾಲಿವುಡ್‌ನಲ್ಲಿ ಸಖತ್‌ ಟ್ರೆಂಡಿಂಗ್‌ ಆಗ್ತಿರೋದು ಗರ್ಭಿಣಿಯರ ಹೈ ಹೀಲ್ಸ್‌. ಇದು ಏಕಕಾಲಕ್ಕೆ ಮೆಚ್ಚುಗೆಗೂ ಕಟು ಟೀಕೆಗೂ ಪಾತ್ರವಾಗುತ್ತಿದೆ.

ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಗರ್ಭವತಿಯರಾದಾಗ ಹೀಲ್ಸ್‌ ಧರಿಸೋದು ಹೊಸತೇನೂ ಅಲ್ಲ. ಆದರೆ ಇದೀಗ ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಟ್ರೆಂಡಿಂಗ್‌ ಆಗಲು ಕಾರಣ ದೀಪಿಕಾ ಪಡುಕೋಣೆ. 

ಈಕೆ ಇತ್ತೀಚೆಗೆ ತನ್ನ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಬಾಡಿಕಾನ್‌ ಡ್ರೆಸ್‌ ಜೊತೆಗೆ ಅದಕ್ಕೆ ಮ್ಯಾಚಿಂಗ್‌ ಆಗುವ ಹೈ ಹೀಲ್ಸ್‌ ಧರಿಸಿ ಬಂದಿದ್ದರು.

ತುಂಬು ಗರ್ಭಿಣಿ ಚೂಪಾದ ಪೆನ್ಸಿಲ್‌ ಹೀಲ್ಸ್‌ನಲ್ಲಿ ಸರ್ಕಸ್‌ ಮಾಡುತ್ತಾ ಎಲ್ಲಿ ಬಿದ್ದು ಬಿಡುತ್ತಾರೋ ಎಂಬ ಆತಂಕದಲ್ಲಿ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಓಡೋಡಿ ಬಂದು ಡಿಪ್ಪಿ ಸಹಾಯಕ್ಕೆ ನಿಂತರು. 

ಈ ಈವೆಂಟ್‌ನಲ್ಲಿ ದೀಪಿಕಾ ಲುಕ್ಕಿಗೆ ಭರಪೂರ ಮೆಚ್ಚುಗೆಯೇನೋ ಹರಿದುಬಂತು. ಆದರೆ ಆ ಬಳಿಕ ನೆಟ್ಟಿಗರು ಕಲ್ಕಿ ನಟಿಯನ್ನು ಟ್ರೋಲ್‌ ಮಾಡಿದ್ದೇ ಮಾಡಿದ್ದು. ‘ನೋ ಯುಟಿರಸ್‌, ನೋ ಗ್ಯಾನ್‌’ (ಗರ್ಭಕೋಶವಿಲ್ಲ, ಅದರತ್ತ ಧ್ಯಾನವೂ ಇಲ್ಲ) ಎಂಬುದು ಟ್ರೆಂಡಿಂಗ್‌ ಆಯ್ತು.ಇದರಿಂದ ರೊಚ್ಚಿಗೆದ್ದ ಬಾಲಿವುಡ್‌ನ ಕೆಲವೊಂದಿಷ್ಟು ಫ್ಯಾಶನ್‌ ಪ್ರಿಯರು ‘ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌’ ಎಂಬ ಟ್ರೆಂಡ್‌ ಅನ್ನೇ ಹುಟ್ಟು ಹಾಕಿದ್ದಾರೆ. 

ರಿಚಾ ಚಡ್ಡಾ ಸೇರಿದಂತೆ ಹಲವರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.ಇದರ ಜೊತೆಗೆ ಈ ಹಿಂದೆ ಪ್ರೆಗ್ನೆನ್ಸಿಯಲ್ಲಿ ಹೈಹೀಲ್ಸ್‌ ಧರಿಸಿದ ಆಲಿಯಾ ಭಟ್‌, ಕರೀನಾ ಕಪೂರ್‌, ಅನುಷ್ಕಾ ಶರ್ಮಾ ಫೋಟೋಗಳು ಮತ್ತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಓಡಾಡುತ್ತಿವೆ.