ಕನ್ನಡಪ್ರಭ ಸಿನಿವಾರ್ತೆ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಾಯಕ ಭೈರವನ ಸ್ಪೆಷಲ್‌ ವಾಹನ ‘ಬುಜ್ಜಿ’ ಕುಂದಾಪುರಕ್ಕೆ ಬಂದಿದೆ. ಅಲ್ಲಿ ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ನಲ್ಲಿರುವ ರಿಷಬ್‌ ಶೆಟ್ಟಿ ಈ ಬುಜ್ಜಿ ಏರಿ ಒಂದು ರೌಂಡ್‌ ಅಡ್ಡಾಡಿ ಬಂದಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ಕಲ್ಕಿ ಸಿನಿಮಾದ ನಿರ್ಮಿಸಿರುವ ವೈಜಯಂತಿ ಮೂವೀಸ್‌ ಶೇರ್‌ ಮಾಡಿದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ನಟಿಸಿರುವ ನಾಳೆ (ಜೂ.27) ಬಿಡುಗಡೆ ಆಗಲಿದೆ.