ಕನ್ನಡಪ್ರಭ ಸಿನಿವಾರ್ತೆಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಗೆ ಕೊರಗಜ್ಜ ದೈವದ ಮುಂದೆ ಚಿತ್ರತಂಡ ವಿಶೇಷ ಕೋರಿಕೆ ಸಲ್ಲಿಸಿದೆ. ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಕೋಲ ನೀಡಿದ ಚಿತ್ರತಂಡ ಫಸ್ಟ್‌ ಲುಕ್‌ ಬಿಡುಗಡೆಗೆ ಅನುಮತಿ ಬೇಡಿತು.

‘ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ಪ್ರದರ್ಶಿಸಿ ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ದುರುಪಯೋಗಪಡಿಸಬಾರದು’ ಎಂಬ ಷರತ್ತಿನೊಂದಿಗೆ ಕೊರಗಜ್ಜ ದೈವ ಫಸ್ಟ್‌ ಲುಕ್‌ ಬಿಡುಗಡೆಗೆ ಅನುಮತಿ ನೀಡಿತು.

ಮಾಜಿ ಸಚಿವೆ ಮೋಟಮ್ಮ, ನಟಿ ಭವ್ಯ ಭೂತ ಕೋಲದಲ್ಲಿ ಚಿತ್ರತಂಡದೊಂದಿಗೆ ಹಾಜರಿದ್ದರು.