ಸರೆಗಮಪ ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ಗಾಯಕಿ ಸುಹಾನಾ ಸಯ್ಯದ್‌ ತನ್ನ ಬಹುಕಾಲದ ಗೆಳೆಯ ನಿತಿನ್‌ ಶಿವಾಂಶ್‌ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದಾರೆ. ಕನಕಪುರ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯದ ವಿಧಿಯನುಸಾರ ವಿವಾಹ ನೆರೆವೇರಿದೆ.

 ಸಿನಿವಾರ್ತೆ

ಈ ಸಂದರ್ಭ ಎರಡೂ ಕುಟುಂಬಗಳ ಹಿರಿಯರು, ಸ್ನೇಹಿತರು ಹಾಜರಿದ್ದರು. ನಿತಿನ್‌ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಸುಹಾನಾ ಗಾಯನದ ಜೊತೆಗೆ ರಂಗಭೂಮಿ, ಯಕ್ಷಗಾನಗಳಲ್ಲೂ ತೊಡಗಿಸಿಕೊಂಡ ಬಹುಮುಖ ಪ್ರತಿಭೆ.

ಶಾಲೆಯಲ್ಲಿ ಪರಸ್ಪರ ಪರಿಚಿತರಾದ ಸುಹಾನಾ ಹಾಗೂ ನಿತಿನ್‌ ಅವರದು ಸುಮಾರು 16 ವರ್ಷಗಳಿಗೂ ಮೀರಿದ ಪ್ರೇಮವಾಗಿದ್ದು, ಇತ್ತೀಚೆಗಷ್ಟೇ ಈ ಗಾಯಕಿ ತನ್ನ ಪ್ರೇಮಕಥೆಯನ್ನು ಸೋಷಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು.

‘ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮಕಾವ್ಯ ದೇವ ವಿರಚಿತ. ನಮ್ಮ ನಡೆ ವಿಶ್ವ ಮಾನವತ್ವದೆಡೆ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದುಕೊಂಡಿದ್ದರು.

ಸುಹಾನಾ ಹಾಗೂ ನಿತಿನ್‌ ವಿವಾಹದ ಫೋಟೋ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದ್ದು ಹಲವರು ನೂತನ ದಂಪತಿಗೆ ಶುಭ ಕೋರಿದ್ದಾರೆ.