ಎಲ್ಲೆಲ್ಲೂ ಸು ಫ್ರಂ ಸೋ ಸಿನಿಮಾದ ‘ಬಾವ’ನ ಹವಾ - 7 ದಿನ, 7 ಲಕ್ಷ 75 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌

| N/A | Published : Aug 02 2025, 02:53 PM IST / Updated: Aug 02 2025, 02:54 PM IST

Su from So_Kannada Movie
ಎಲ್ಲೆಲ್ಲೂ ಸು ಫ್ರಂ ಸೋ ಸಿನಿಮಾದ ‘ಬಾವ’ನ ಹವಾ - 7 ದಿನ, 7 ಲಕ್ಷ 75 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಸು ಫ್ರಂ ಸೋ’ ಸಿನಿಮಾದ ‘ಬಂದರು ಬಂದರು ಬಾವ ಬಂದರು’ ಹಾಡು ಭಾರೀ ಜನಪ್ರಿಯತೆ ಪಡೆದಿದೆ. ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಬಾವನ ಹವಾ ಸೃಷ್ಟಿಯಾಗಿದೆ.

 ಸಿನಿವಾರ್ತೆ

‘ಸು ಫ್ರಂ ಸೋ’ ಸಿನಿಮಾದ ‘ಬಂದರು ಬಂದರು ಬಾವ ಬಂದರು’ ಹಾಡು ಭಾರೀ ಜನಪ್ರಿಯತೆ ಪಡೆದಿದೆ. ಸೋಷಲ್‌ ಮೀಡಿಯಾದಲ್ಲಿ ಭರ್ಜರಿ ಬಾವನ ಹವಾ ಸೃಷ್ಟಿಯಾಗಿದೆ.

ನಿರೀಕ್ಷೆಗೂ ಮೀರಿದ ಜನಪ್ರಿಯತೆ ಕಂಡು ಖುಷಿಯಾಗಿರುವ ನಿರ್ಮಾಪಕ

ರಾಜ್‌ ಬಿ ಶೆಟ್ಟಿ, ರವಿ ಅಣ್ಣ ಪಾತ್ರಧಾರಿ ಶನೀಲ್‌ ಗೌತಮ್‌ ಹಾಗೂ ನಿರ್ದೇಶಕ, ನಟ ಜೆ ಪಿ ತುಮಿನಾಡು ಈ ಹಾಡಿಗೆ ಕುಡುಕ ಬಾವನ ಪಾತ್ರದಂತೆ ಹೆಜ್ಜೆ ಹಾಕಿದ್ದಾರೆ.

‘ಇದು ನಮ್ಮ ಬಾವ ಬಂದರು ವರ್ಶನ್‌. ಥ್ಯಾಂಕ್ಯೂ ಕರ್ನಾಟಕ, ನೆಕ್ಸ್ಟ್ ಸ್ಟಾಪ್‌ ಕೇರಳ’ ಎಂದು ರಾಜ್‌ ಶೆಟ್ಟಿ ಹೇಳಿದ್ದಾರೆ.

ಈ ಹಾಡು ಇನ್ನೂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿಲ್ಲ. ಕೆಲವೇ ಸೆಕೆಂಡ್‌ಗಳ ಹಾಡಿನ ಟ್ಯೂನ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಾಕಷ್ಟು ಮಂದಿ ಇದಕ್ಕೆ ರೀಲ್ಸ್‌ ಮಾಡಿದ್ದಾರೆ.

7 ದಿನಕ್ಕೆ 7 ಲಕ್ಷ 75 ಸಾವಿರಕ್ಕೂ ಅಧಿಕ ಟಿಕೆಟ್‌ ಸೇಲ್‌

ಸಿನಿಮಾದ ರಿಪೋರ್ಟ್ ಕಾರ್ಡ್‌ ಅನ್ನು ರಾಜ್‌ ಬಿ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಗುರುವಾರದವರೆಗೆ ಈ ಚಿತ್ರವನ್ನು 7 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ ಎಂದು ಈ ರಿಪೋರ್ಟ್‌ನಲ್ಲಿ ರಿವೀಲ್‌ ಆಗಿದೆ. ರಿಲೀಸ್‌ ಆಗಿ ಇಷ್ಟು ದಿನಗಳಾದರೂ ಚಿತ್ರ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿದ್ದು, ಬಹುತೇಕ ವೀಕೆಂಡ್‌ ಶೋಗಳು ಮೊದಲೇ ಹೌಸ್‌ಫುಲ್‌ ಆಗಿವೆ.

Read more Articles on