ಕ್ರೇಜಿಸ್ಟಾರ್ ರವಿಚಂದ್ರನ್‌, ಧನ್ಯಾ ರಾಮ್‌ಕುಮಾರ್‌ ಮುಂತಾದವರು ನಟಿಸಿರುವ ದಿ ಜಡ್ಜ್‌ಮೆಂಟ್ ಚಿತ್ರಕ್ಕೆ ಶೂಟಿಂಗ್ ಮುಕ್ತಾಯ ಆಗಿದೆ.

ಸಿನಿವಾರ್ತೆ

ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ, ಗುರುರಾಜ್‌ ಕುಲಕರ್ಣಿ ನಿರ್ದೇಶನದ ‘ದಿ ಜಡ್ಜ್‌ಮೆಂಟ್‌’ ಚಿತ್ರದ ಚಿತ್ರೀಕರಣ ಮುಗಿದಿದೆ.

ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುರಾಜ್‌ ಕುಲಕರ್ಣಿ, ‘ಇದು ಕೋರ್ಟ್‌ ರೂಮ್‌ ಥ್ರಿಲ್ಲರ್‌ ಸಿನಿಮಾ. ಈ ಚಿತ್ರದ ಕಂಟೆಂಟ್‌ ಕೇಳಿದ ಒಬ್ಬರು ಇದು ಮಲಯಾಳಂ ಚಿತ್ರದಂತಿದೆ ಎಂದು ಮೆಚ್ಚಿಕೊಂಡರು’ ಎಂದರು.

ಧನ್ಯಾ ರಾಮ್‌ಕುಮಾರ್‌, ‘ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದಂದೇ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿದ್ದು ವಿಶೇಷ. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ನಿರ್ದೇಶಕರು ಕತೆಯನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ’ ಎಂದು ಹೇಳಿದರು.

ರಾಜ್‌ಕುಮಾರ್‌ ಪುತ್ರಿ ಪೂರ್ಣಿಮಾ, ‘ನನ್ನ ಮಗಳು ಧನ್ಯಾ ಈ ಚಿತ್ರದಲ್ಲಿ ನಟಿಸುವ ಮೂಲಕ ದೊಡ್ಡ ದೊಡ್ಡ ಕಲಾವಿದರ ಜತೆಗೆ ಸ್ಕ್ರೀನ್‌ ಹಂಚಿಕೊಂಡಿದ್ದಾಳೆ. ಅವಳು ಈ ಚಿತ್ರದಿಂದ ತುಂಬಾ ಕಲಿತಿದ್ದಾಳೆ’ ಎಂದರು. ಮೇಘನಾ ಗಾಂವ್ಕರ್‌, ಶರತ್‌ ಗೌಡ, ನವಿಲಾ, ರೇಖಾ ಕೂಡ್ಲಿಗಿ ಹಾಜರಿದ್ದರು. ದಿಗಂತ್‌, ಲಕ್ಷ್ಮೀ ಗೋಪಾಲಸ್ವಾಮಿ, ನಾನಾ ಬಚ್ಚನ್‌, ರವಿಶಂಕರ್‌ ಗೌಡ, ನವಿಲಾ ತಾರಾಬಳಗದಲ್ಲಿದ್ದಾರೆ.