ಮಹಿಳೆಯರು ಬರೆದಪುಸ್ತಕ ಬೋಧನೆಗೆತಾಲಿಬಾನ್‌ ಬ್ಯಾನ್‌

| Published : Sep 20 2025, 01:03 AM IST

ಸಾರಾಂಶ

ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ.

ಕಾಬೂಲ್‌: ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ. ಈ ಪುಸ್ತಕಗಳು ಷರಿಯಾ ಕಾನೂನು, ತಾಲಿಬಾನ್‌ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವುಗಳ ಬೋಧನೆ ನಿಷೇಧಿಸುವಂತೆ ಎಲ್ಲಾ ವಿವಿಗಳಿಗೆ ಅಲ್ಲಿನ ಶಿಕ್ಷಣ ಸಚಿವ ಸೂಚಿಸಿದ್ದಾರೆ. ಈ ಹಿಂದೆ ಭೀಕರ ಭೂಕಂಪಕ್ಕೆ ಆಫ್ಘಾನ್‌ ತುತ್ತಾಗಿದ್ದಾಗ, ಮಹಿಳೆಯರ ರಕ್ಷಣೆ ಮೇಲೆ ತಾಲಿಬಾನ್‌ ನಿಷೇಧ ಹೇರಿತ್ತು. ಜೊತೆಗೆ ಹೆಣ್ಣುಮಕ್ಕಳಿಗೆ 5ನೇ ತರಗತಿಗಿಂತ ಹೆಚ್ಚು ಶಿಕ್ಷಣ, ಪರಪುರುಷರಿಗೆ ಮುಖ ತೋರಿಸುವುದು, ವಿಶ್ವ ವಿದ್ಯಾಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿತ್ತು.