ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್‌ ಖರೀದಿಗೆ ದುಂಬಾಲು: ಮುಂಬೈನಲ್ಲಿ ಹೊಡೆದಾಟ

| Published : Sep 20 2025, 01:03 AM IST

ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್‌ ಖರೀದಿಗೆ ದುಂಬಾಲು: ಮುಂಬೈನಲ್ಲಿ ಹೊಡೆದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಐಫೋನ್‌ 17 ಸರಣಿಯ ಮೊಬೈಲ್‌ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್‌ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.

₹2.9 ಲಕ್ಷ ಬೆಲೆ ಮೊಬೈಲ್‌ ಖರೀದಿಗೆ ಮುಗಿಬಿದ್ದ ಜನ

ರಾತ್ರಿಯಿಂದಲೇ ಸರದಿ ನಿಂತ ಆ್ಯಪಲ್‌ ಅಭಿಮಾನಿಗಳು

ಮುಂಬೈ: ಐಫೋನ್‌ 17 ಸರಣಿಯ ಮೊಬೈಲ್‌ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್‌ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಾಲ್‌ ಆಫ್‌ ಏಷ್ಯಾ, ದೆಹಲಿ ಮತ್ತು ಮುಂಬೈ,ಫೋನ್‌ ಖರೀದಿಗೆ ಜನಸ್ತೋಮವೇ ನೆರೆದಿತ್ತು. ತಡರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನ ಮೊಬೈಲ್‌ ಖರೀದಿಗೆ ಮುಂದಾಗಿದ್ದರು. ಈ ನಡುವೆ ಮುಂಬೈನ ಬಂದಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ಸೆಂಟರ್‌ನಲ್ಲಿರುವ ಆ್ಯಪಲ್‌ ಸ್ಟೋರ್‌ ಹೊರಗಡೆ ಮೊಬೈಲ್‌ ಖರೀದಿಗೆ ಬಂದಿದ್ದ ಪುರುಷರ ನಡುವೆ ನೂಕುನುಗ್ಗಲಿನಲ್ಲಿ ಮಾರಾಮಾರಿ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ಆ್ಯಪಲ್‌ ತನ್ನ ಐಫೋನ್ 17 ಸರಣಿಯನ್ನು 82,900 - 2,29,900 ಬೆಲೆಯಲ್ಲಿ ಅನಾವರಣಗೊಳಿಸಿದೆ.