ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಭಾರತದಿಂದ ಅಮೆರಿಕಕ್ಕೆ 600 ಟನ್‌ ತೂಗುವ 15 ಲಕ್ಷ ಐಫೋನ್‌ ಸಾಗಣೆ!

| N/A | Published : Apr 12 2025, 12:50 AM IST / Updated: Apr 12 2025, 05:05 AM IST

ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಭಾರತದಿಂದ ಅಮೆರಿಕಕ್ಕೆ 600 ಟನ್‌ ತೂಗುವ 15 ಲಕ್ಷ ಐಫೋನ್‌ ಸಾಗಣೆ!
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್‌ ತೂಕ ಬರೋಬ್ಬರಿ 600 ಟನ್‌ ಎಂಬುದು ಗೊತ್ತಾಗಿದೆ. 

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್‌ ತೂಕ ಬರೋಬ್ಬರಿ 600 ಟನ್‌ ಎಂಬುದು ಗೊತ್ತಾಗಿದೆ. 6 ವಿಮಾನಗಳಲ್ಲಿ 600 ಟನ್‌ ತೂಕದ ಒಟ್ಟು 15 ಲಕ್ಷ ಐಫೋನ್‌ಗಳನ್ನು ಆ್ಯಪಲ್‌ ಭಾರತದ ಚೆನ್ನೈ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಸಾಗಿಸಿತ್ತು ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಆ್ಯಪಲ್‌ ಕಂಪನಿಯು ಚೆನ್ನೈ ವಿಮಾನ ನಿಲ್ದಾಣದ ಕಸ್ಟಂ ಇಲಾಖೆಗೆ 30 ತಾಸಿನ ಕಸ್ಟಂ ಪ್ರಕ್ರಿಯೆಯನ್ನು 6 ತಾಸಿಗೆ ಇಳಿಸಲು ಮನವಿ ಮಾಡಿತ್ತು. ಹೀಗಾಗಿ ಕ್ಷಿಪ್ರವಾಗಿ 100 ಟನ್‌ ಹೊರಬಲ್ಲ 6 ವಿಮಾನಗಳ ಮೂಲಕ ಆ್ಯಪಲ್‌ ಕಂಪನಿಯು ಐಫೋನ್‌ಗಳನ್ನು ಸಾಗಿಸಿತ್ತು ಎಂದು ತಿಳಿದುಬಂದಿದೆ.

ತೂಕದ ಲೆಕ್ಕವು ಐಫೋನ್‌ 14 ಜೊತೆ ಚಾರ್ಜಿಂಗ್ ಕೇಬಲ್‌ ಸೇರಿದರೆ ಒಂದು ಪೀಸ್‌ನ ತೂಕವು 350 ಗ್ರಾಂ ಆಗಲಿದ್ದು, ಹೀಗೆ ಅಂದಾಜಿನ ಲೆಕ್ಕ ಹಾಕಿದಾಗ 15 ಲಕ್ಷ ಫೋನ್‌ಗಳು ಸಾಗಾಟವಾಗಿದೆ ಎನ್ನಲಾಗಿದೆ. ಈ ಮೂಲಕ ಅಮೆರಿಕದಲ್ಲಿ ಐಫೋನ್‌ ದಾಸ್ತಾನು ಹೆಚ್ಚಿಸಿಕೊಂಡು, ತೆರಿಗೆ ಹೊಡೆತದಿಂದ ಪಾರಾಗಲು ಆ್ಯಪಲ್‌ ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ.