ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ

| N/A | Published : Sep 02 2025, 02:27 PM IST

I Phone

ಸಾರಾಂಶ

ದಕ್ಷಿಣ ಭಾರತದ ಮೊದಲ ಮತ್ತು ದೇಶದ ಮೂರನೇ ಆ್ಯಪಲ್ ಸ್ಟೋರ್ ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಾಲ್ ಆಫ್ ಏಷ್ಯಾದಲ್ಲಿ ಸೆ.2ರಂದು ಕಾರ್ಯಾರಂಭ ಮಾಡಲಿದೆ.

  ಬೆಂಗಳೂರು :  ದಕ್ಷಿಣ ಭಾರತದ ಮೊದಲ ಮತ್ತು ದೇಶದ ಮೂರನೇ ಆ್ಯಪಲ್ ಸ್ಟೋರ್ ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಾಲ್ ಆಫ್ ಏಷ್ಯಾದಲ್ಲಿ ಸೆ.2ರಂದು ಕಾರ್ಯಾರಂಭ ಮಾಡಲಿದೆ.

ಐಫೋನ್, ಐಮ್ಯಾಕ್, ಮ್ಯಾಕ್‌ಬುಕ್, ಐಪ್ಯಾಡ್, ಆ್ಯಪಲ್ ವಾಚ್, ಏರ್‌ಪಾಡ್ ಸೇರಿದಂತೆ ಆ್ಯಪಲ್ ಕಂಪನಿಯ ಎಲ್ಲಾ ಸರಣಿಯ ಉತ್ಪನ್ನಗಳು, ಪರಿಕರಗಳು ಸ್ಟೋರ್‌ನಲ್ಲಿ ಲಭ್ಯ ಇವೆ. ವಿಶಾಲವಾದ ಆ್ಯಪಲ್ ಸ್ಟೋರ್‌ನಲ್ಲಿ ಕಾರ್ಯ ನಿರ್ವಹಿಸಲು, ಗ್ರಾಹಕರ ಉತ್ತಮ ಸೇವೆ ಒದಗಿಸಲು ದೇಶದ 15 ರಾಜ್ಯಗಳ 70 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಬೆಂಗಳೂರು ನಗರವೂ ಭಾರತದ ತಂತ್ರಜ್ಞಾನ ರಾಜಧಾನಿಯಾಗಿದೆ. ಹೀಗಾಗಿ, ಮುಂಬೈ ಮತ್ತು ದಿಲ್ಲಿ ಬಳಿಕ ಬೆಂಗಳೂರಿನಲ್ಲಿ ಆ್ಯಪಲ್ ಸ್ಟೋರ್ ಆರಂಭಿಸಲಾಗಿದೆ. ಆ್ಯಪಲ್ ಉತ್ಪನ್ನಗಳನ್ನು ಬಳಸುವುದು ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಹಾಗೂ ತಮ್ಮ ಉದ್ಯಮ, ವ್ಯಾಪಾರ, ಕೆಲಸಗಳನ್ನು ಮತ್ತಷ್ಟು ವಿಸ್ತರಿಸಲು ಅನುಕೂಲವಾಗುವಂತೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಯಲು ನಿತ್ಯ ತರಬೇತಿ ಸೆಷೆನ್ಸ್‌ಗಳನ್ನು ನಡೆಸಲಾಗುತ್ತದೆ ಎಂದು ಆ್ಯಪಲ್‌ನ ರಿಟೇಲ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷೆ ಡಿ. ಒಬ್ರಯಾನ್ ಹೇಳಿದ್ದಾರೆ.

ಸ್ಟೋರ್‌ನಲ್ಲಿ ಆ್ಯಪಲ್ ಉತ್ಪನ್ನಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ಸಂಬಂಧಿಸಿದ ಸಮಸ್ಯೆಗಳಿಗೆ ಸರ್ವೀಸಿಂಗ್ ಕೂಡ ಲಭ್ಯವಿದೆ. ತಜ್ಞ ಎಂಜಿನಿಯರ್‌ಗಳ ತಂಡ ಆ್ಯಪಲ್ ಗ್ರಾಹಕರಿಗೆ ಅಗತ್ಯ ಸೇವೆಯನ್ನು ಒದಗಿಸಲಿದೆ. ದೇಶದಲ್ಲಿ ಬಿಡುಗಡೆಯಾಗುವ ಆ್ಯಪಲ್‌ ಉತ್ಪನ್ನಗಳು ಈ ಸ್ಟೋರ್‌ನಲ್ಲಿ ಮೊದಲ ದಿನವೇ ಲಭ್ಯವಾಗುತ್ತವೆ ಎಂದು ಆ್ಯಪಲ್‌ನ ಸಿಬ್ಬಂದಿ ಮಾಹಿತಿ ನೀಡಿದರು.

Read more Articles on