ಸಾರಾಂಶ
ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದ ದ್ವಿಪಥ ಸುರಂಗ ಉದ್ಘಾಟಿಸಿದ ಬೆನ್ನಲ್ಲೇ ಮತ್ತೆ ಕ್ಯಾತೆ ತೆಗೆದಿದ್ದು, ಕ್ಸಿಜಾಂಗ್ (ಅರುಣಾಚಲಕ್ಕೆ ಚೀನಾ ಇಟ್ಟಿರುವ ಹೆಸರು) ತನಗೆ ಸೇರಿದ ಅಂತರ್ಗತ ಭಾಗ ಎಂದು ಪ್ರತಿಪಾದಿಸಿದೆ.
ಬೀಜಿಂಗ್: ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದ ದ್ವಿಪಥ ಸುರಂಗ ಉದ್ಘಾಟಿಸಿದ ಬೆನ್ನಲ್ಲೇ ಮತ್ತೆ ಕ್ಯಾತೆ ತೆಗೆದಿದ್ದು, ಕ್ಸಿಜಾಂಗ್ (ಅರುಣಾಚಲಕ್ಕೆ ಚೀನಾ ಇಟ್ಟಿರುವ ಹೆಸರು) ತನಗೆ ಸೇರಿದ ಅಂತರ್ಗತ ಭಾಗ ಎಂದು ಪ್ರತಿಪಾದಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಚೀನಾದ ರಕ್ಷಣಾ ಇಲಾಖೆ ವಕ್ತಾರ ಜಾಂಗ್ ಶಿಯೋಗಾಂಗ್, ‘ಕ್ಸಿಜಾಂಗ್ ಪ್ರದೇಶವು ಚೀನಾದ ದಕ್ಷಿಣ ಟಿಬೆಟ್ ಪ್ರಾಂತ್ಯದ ಅಂತರ್ಗತ ಭಾಗವಾಗಿದ್ದು, ಭಾರತ ಅರುಣಾಚಲ ಎಂಬ ಹೆಸರಿನಲ್ಲೇ ಕಾನೂನುಬಾಹಿರವಾಗಿ ಆ ಜಾಗವನ್ನು ಅತಿಕ್ರಮಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.
ಈ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ‘ಅರುಣಾಚಲ ಹಿಂದೆಯೂ, ಇಂದು ಮತ್ತು ಮುಂದೂ ಸಹ ಭಾರತದ ಪ್ರದೇಶವಾಗಿರಲಿದೆ’ ಎಂದಿದ್ದಾರೆ.