ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ಗೆ ಬರುವಂತೆ ನೀಡಿದ ಆಮಂತ್ರಣವನ್ನು ತಿರಸ್ಕರಿಸಿ, ಜಗನ್ನಾಥನ ಪವಿತ್ರಭೂಮಿ ಒಡಿಶಾಗೆ ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಭುವನೇಶ್ವರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ಗೆ ಬರುವಂತೆ ನೀಡಿದ ಆಮಂತ್ರಣವನ್ನು ತಿರಸ್ಕರಿಸಿ, ಜಗನ್ನಾಥನ ಪವಿತ್ರಭೂಮಿ ಒಡಿಶಾಗೆ ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ಒಡಿಶಾದ ಭುವನೇಶ್ವರದಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಚರ್ಚೆ ಮತ್ತು ಔತಣಕ್ಕಾಗಿ ವಾಷಿಂಗ್‌ಟನ್‌ಗೆ ಬರುವಂತೆ ಆಮಂತ್ರಿಸಿದ್ದರು.

 ನಾನಾಗ ಜಿ7 ಶೃಂಗಸಭೆಯ ನಿಮಿತ್ತ ಕೆನಡಾದಲ್ಲಿದ್ದೆ. ಆಹ್ವಾನಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿ, ಜಗನ್ನಾಥನ ಪುಣ್ಯಭೂಮಿ ಒಡಿಶಾಗೆ ಹೋಗಬೇಕಿದೆ, ಹಾಗಾಗಿ ವಾಷಿಂಗ್‌ಟನ್‌ಗೆ ಬರಲಾಗದು ಎಂದು ತಿಳಿಸಿದೆ’ ಎಂದು ಹೇಳಿದರು.