ಸಾರಾಂಶ
 ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ನಿರಾಕರಿಸಬೇಕು. ಚುನಾವಣಾ ಪ್ರಚಾರ ಹಕ್ಕು ಮೂಲಭೂತ ಹಾಗೂ ಸಾಂವಿಧಾನಿಕವಲ್ಲ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 
ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ನಿರಾಕರಿಸಬೇಕು. ಚುನಾವಣಾ ಪ್ರಚಾರ ಹಕ್ಕು ಮೂಲಭೂತ ಹಾಗೂ ಸಾಂವಿಧಾನಿಕವಲ್ಲ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಬೇಕು ಎಂದು ಜಾರಿ ನಿರ್ದೇಶನಾಲಯ 44 ಪುಟಗಳ ಅಫಿಡವಿಟ್ ಸಲ್ಲಿಸಿದೆ. ಈ ಅಫಿಡವಿಟ್‌ನಲ್ಲಿ,‘ಚುನಾವಣಾ ಪ್ರಚಾರ ಸಾಂವಿಧಾನಿಕ ಅಥವ ಮೂಲಭೂತ ಹಕ್ಕಲ್ಲ. ಹಿಂದೆ ನಡೆದ ಘಟನೆಗಳನ್ನು ಅವಲೋಕಿಸಿದರೆ, ನ್ಯಾಯಾಂಗ ಬಂಧನದಲ್ಲಿರುವ ಯಾವುದೇ ರಾಜಕಾರಣಿಗಳಿಗೂ ಜಾಮೀನು ನೀಡಿಲ್ಲ.
ಒಂದು ವೇಳೆ ಜಾಮೀನು ನೀಡಿದರೆ, ಜೈಲಿನಲ್ಲಿರುವ ಮಿಕ್ಕ ರಾಜಕಾರಣಿಗಳು ಜಾಮೀನು ಕೇಳುವುದಿಲ್ಲ ಎಂದು ಹೇಗೆ ಹೇಳಬಹುದು’ ಎಂದು ಪ್ರಶ್ನಿಸಿದೆ.ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ. ಕೇಜ್ರಿವಾಲ್ ಅವರನ್ನು ಮಾ.21ರಂದು ಬಂಧಿಸಿತ್ತು.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))