5 ವರ್ಷ ಮನೆಗೆ ಮರಳಲ್ಲ : ನೀಟ್‌ ತರಬೇತಿ ಪಡೆಯುತ್ತುದ್ದ ವಿದ್ಯಾರ್ಥಿ ಪರಾರಿ

| Published : May 10 2024, 01:32 AM IST / Updated: May 10 2024, 07:24 AM IST

5 ವರ್ಷ ಮನೆಗೆ ಮರಳಲ್ಲ : ನೀಟ್‌ ತರಬೇತಿ ಪಡೆಯುತ್ತುದ್ದ ವಿದ್ಯಾರ್ಥಿ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಸ್ಥಾನದ ಕೋಟಾದಲ್ಲಿ ನೀಟ್‌ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ, ಇನ್ನು ಮುಂದೆ ಓದಲು ಬಯಸುವುದಿಲ್ಲ. 5 ವರ್ಷ ಮನೆಯಿಂದ ದೂರ ಉಳಿಯುತ್ತೇನೆ’ ಎಂದು ಸಂದೇಶ ಕಳುಹಿಸಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕೋಟಾ: ರಾಜಸ್ಥಾನದ ಕೋಟಾದಲ್ಲಿ ನೀಟ್‌ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ, ಇನ್ನು ಮುಂದೆ ಓದಲು ಬಯಸುವುದಿಲ್ಲ. 5 ವರ್ಷ ಮನೆಯಿಂದ ದೂರ ಉಳಿಯುತ್ತೇನೆ’ ಎಂದು ಸಂದೇಶ ಕಳುಹಿಸಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ರಾಜಸ್ಥಾನ ಮೂಲದ19 ವರ್ಷದ ರಾಜೇಂದ್ರ ಮೀನಾ ನಾಪತ್ತೆಯಾದ ಯುವಕ.

ಯುವಕನ ಸಂದೇಶದಲ್ಲೇನಿದೆ?

‘ನಾನು ಮನೆಯಿಂದ ದೂರ ಉಳಿಯುತ್ತೇನೆ. ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ಇಷ್ಟವಿಲ್ಲ. ನನ್ನ ಬಳಿ 8 ಸಾವಿರ ರು ಹಣವಿದೆ. ಆ ಹಣದ ಜೊತೆಗೆ ಐದು ವರ್ಷಗಳ ಕಾಲ ದೂರ ಹೋಗುತ್ತೇನೆ. ನನ್ನ ಮೊಬೈಲ್ ಫೋನ್ ಮಾರಾಟ ಮಾಡುತ್ತೇನೆ. ಸಿಮ್ ಕಾರ್ಡ್‌ನ್ನು ಮುರಿದು ಹಾಕುತ್ತೇನೆ. ದಯವಿಟ್ಟು ಅಮ್ಮನಿಗೆ ಚಿಂತೆ ಮಾಡಬೇಡ ಎಂದು ಹೇಳಿ.

 ನಾನು ಯಾವುದೇ ತಪ್ಪು ಹಾದಿ ತುಳಿಯುವುದಿಲ್ಲ. ಎಲ್ಲರ ಮೊಬೈಲ್ ಸಂಖ್ಯೆ ನನ್ನಲಿದೆ. ಅಗತ್ಯವಿದ್ದಾಗ ಕರೆ ಮಾಡುತ್ತೇನೆ. ಖಂಡಿತವಾಗಿಯೂ ವರ್ಷಕ್ಕೊಮ್ಮೆ ಕರೆ ಮಾಡುತ್ತೇನೆ.’ ಎಂದು ಸುದೀರ್ಘ ಸಂದೇಶವನ್ನು ತನ್ನ ತಂದೆಗೆ ಮೊಬೈಲ್ ಮೂಲಕ ಕಳುಹಿಸಿ ಯುವಕ ನಾಪತ್ತೆಯಾಗಿದ್ದಾನೆ.