ಜೆಟ್‌ ಏರ್ವೇಸ್‌ ಸ್ಥಾಪಕ ನರೇಶ್‌ಗೆ ಸೇರಿದ 503 ಕೋಟಿ ರು. ಇ.ಡಿ. ಜಪ್ತಿ

| Published : Nov 02 2023, 01:02 AM IST

ಜೆಟ್‌ ಏರ್ವೇಸ್‌ ಸ್ಥಾಪಕ ನರೇಶ್‌ಗೆ ಸೇರಿದ 503 ಕೋಟಿ ರು. ಇ.ಡಿ. ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಸೇರಿದ 503 ಕೋಟಿ ರು. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಬ್ಯಾಂಕ್‌ ಸಾಲ ವಂಚನೆ ಪ್ರಕರಣ । ವಿದೇಶದಲ್ಲಿದ್ದ ಆಸ್ತಿಯೂ ಮುಟ್ಟುಗೋಲು ನವದೆಹಲಿ: ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಸೇರಿದ 503 ಕೋಟಿ ರು. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ನರೇಶ್‌, ಅವರ ಕುಟುಂಬ ಮತ್ತು ಅವರ ಕಂಪನಿಗೆ ಸೇರಿದ ಆಸ್ತಿಗಳನ್ನು ಭಾರತ, ಲಂಡನ್‌ ಮತ್ತು ದುಬೈಗಳಲ್ಲಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಬುಧವಾರ ತಿಳಿಸಿದೆ. ಜಪ್ತಿ ಮಾಡಲಾದ ಆಸ್ತಿಯಲ್ಲಿ 17 ಫ್ಲಾಟ್‌ಗಳು, ಬಂಗಲೆಗಳು ಮತ್ತು ವಾಣಿಜ್ಯ ನಿವೇಶನಗಳು ಸೇರಿವೆ. ಈ ಆಸ್ತಿಗಳು ಜೆಟ್‌ ಏರ್‌ವೇಸ್‌ ಪ್ರೈ.ಲಿ., ಜೆಟ್‌ ಎಂಟರ್‌ಪ್ರೈಸಸ್, ಗೋಯಲ್‌ ಅವರ ಪತ್ನಿ ಅನಿತಾ, ಮಗ ನಿವಾನ್‌ ಅವರಿಗೆ ಸೇರಿದವುಗಳಾಗಿವೆ ಎಂದು ಇ.ಡಿ. ಹೇಳಿದೆ. ಅಕ್ರಮ ಹಣ ಹಣ ವರ್ಗಾವಣೆ ತಡೆ ಕಾಯ್ದೆಯ ಪ್ರಕಾರ ಗೋಯಲ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ ಬಳಿಕ ಸೆ.1ರಂದು ಅವರನ್ನು ಇ.ಡಿ. ಬಂಧಿಸಿತ್ತು.