ಸ್ಫೋಟ ಬಳಿಕ ಫೇಸ್‌ಬುಕ್‌ ಲೈವ್‌ಗೆ ಲಾಡ್ಜ್‌ ಮಾಡಿದ್ದ

| Published : Nov 01 2023, 01:03 AM IST / Updated: Nov 01 2023, 01:04 AM IST

ಸ್ಫೋಟ ಬಳಿಕ ಫೇಸ್‌ಬುಕ್‌ ಲೈವ್‌ಗೆ ಲಾಡ್ಜ್‌ ಮಾಡಿದ್ದ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಅತ್ಯಂತ ಬೃಹತ್‌ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
ಕೊಚ್ಚಿ: ತಲಮಶ್ಶೇರಿಯಲ್ಲಿ ನಡೆದ ಧರ್ಮಸಭೆಯಲ್ಲಿ ಭಾನುವಾರ ಬಾಂಬ್ ಸ್ಫೋಟಿಸಿದ್ದ ಆರೋಪಿ ಡೊಮಿನಿಕ್‌ ಮಾರ್ಟಿನ್‌, ಸ್ಫೋಟದ ಬಳಿಕ ಫೇಸ್‌ಬುಕ್‌ ಲೈವ್‌ ಮಾಡಲು ಲಾಡ್ಜ್‌ಗೆ ತೆರಳಿದ್ದ ಹಾಗೂ 10 ನಿಮಿಷಗಳಲ್ಲೇ ತನ್ನ ಲೈವ್‌ ಮುಗಿದ ಬಳಿಕ ಲಾಡ್ಜ್‌ನಿಂದ ಹೊರಬಂದಿದ್ದ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಶರಣಾಗುವ ಮುನ್ನ ಫೇಸ್‌ಬುಕ್‌ ಲೈವ್‌ ಬಂದು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದ ಮಾರ್ಟಿನ್‌, ಲೈವ್‌ ಮಾಡಲು ತ್ರಿಶ್ಶೂರ್ನಲ್ಲಿರುವ ಲಾಡ್ಜ್‌ಗೆ ಹೋಗಿದ್ದ. ಇಲ್ಲಿನ ರೂಮ್‌ನಲ್ಲಿ ಕೇವಲ 10 ನಿಮಿಷ ತಂಗಿದ್ದ ಮಾರ್ಟಿನ್‌ ತನ್ನ ಗುರುತಿಗೆ ಆಧಾರ್‌ ಕಾರ್ಡ್ ನೀಡಿದ್ದನು ಹಾಗೂ ಯುಪಿಐ ಬಳಸಿ ಪಾವತಿ ಮಾಡಿದ್ದನು ಎಂದು ಲಾಡ್ಜ್‌ ಉದ್ಯೋಗಿಗಳು ತಿಳಿಸಿದ್ದಾರೆ.