ಸಾರಾಂಶ
ಚುನಾವಣೆಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳುವ ಸಲುವಾಗಿ ಚುನಾವಣಾ ಆಯೋಗ 3.4 ಲಕ್ಷ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ.
ನವದೆಹಲಿ: ಏಳು ಹಂತದ ಲೋಕಸಭೆ ಚುನಾವಣೆಗೆ ರಾಜ್ಯ ಪೊಲೀಸ್ ಪಡೆಗಳೊಂದಿಗೆ 3.4 ಲಕ್ಷ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯನ್ನು ಚುನಾವಣಾ ಆಯೋಗ ನಿಯೋಜಿಸುವ ನಿರೀಕ್ಷೆಯಿದೆ.
ಪಶ್ಚಿಮ ಬಂಗಾಳದಲ್ಲಿ ಸಿಎಪಿಎಫ್‌ನ 92,000 ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರದಲ್ಲಿ 63,500, ಛತ್ತೀಸ್‌ಗಢದಲ್ಲಿ 36,000 ಸಿಬ್ಬಂದಿ ನಿಯೋಜಿಸುವ ಸಾಧ್ಯತೆಯಿದೆ.
ರಾಜ್ಯ ಸಿಇಒಗಳ ಮನವಿ ಪರಿಗಣಿಸಿರುವ ಚುನಾವಣಾ ಆಯೋಗ (ಇಸಿ) ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆ ಖಚಿತಪಡಿಸಿಕೊಳ್ಳಲು ಹಂತ ಹಂತವಾಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಎಪಿಎಫ್‌ನ 3,400 ಕಂಪನಿ ನಿಯೋಜಿಸಲು ನಿರ್ಧರಿಸಿದೆ.