ಇಂದು ಹೊಸ ಅವತಾರದಲ್ಲಿ ‘ಲೂನಾ’ ಲಾಂಚ್‌!

| Published : Feb 07 2024, 01:50 AM IST / Updated: Feb 07 2024, 08:15 AM IST

ಸಾರಾಂಶ

70-80ರ ದಶಕದಲ್ಲಿ ಭಾರತದ ರಸ್ತೆ ಆಳಿದ್ದ ಮೊಪೆಡ್‌ಗೆ ಹೊಸ ರೂಪ ಬಂದಿದ್ದು, ಎಲೆಕ್ಟ್ರಿಕ್‌ ಮಾದರಿಯಲ್ಲಿ ಮತ್ತೆ ‘ಚಲ್‌ ಮೇರಿ ಲೂನಾ’ ಮಾರುಕಟ್ಟೆಗೆ ಲೋಕಾರ್ಪಣೆಯಾಗಲಿದೆ.

ನವದೆಹಲಿ: 1970-80ರ ದಶಕದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಲೂನಾ ಮೊಪೆಡ್‌ ಇದೀಗ ಹೊಸ ರೂಪದಲ್ಲಿ ಮತ್ತೆ ರಸ್ತೆಗಿಳಿಯಲು ಸಜ್ಜಾಗಿದೆ. ಲೂನಾ ಸ್ಕೂಟರನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಳೆದ 1 ವರ್ಷದಿಂದ ಕೈನೆಟೆಕ್‌ ಗ್ರೀನ್‌ ಕಂಪನಿ ಪ್ರಯತ್ನ ಪಡುತ್ತಿತ್ತು. ಬುಧವಾರ ಅದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಬೆಲೆಯನ್ನು ಸಹ ಬುಧವಾರವೇ ಘೋಷಿಸಲಿದೆ. 

ಹೇಗಿದೆ ಹೊಸ ಲೂನಾ: ಹಳೆಯ ಲೂನಾ ಮಾದರಿಯಲ್ಲಿಯೇ ಹೊಸತನ್ನು ಕೂಡಾ ಬಹುಪಯೋಗಿ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ತಯಾರಿಸಲಾಗಿದೆ. ಜೊತೆಗೆ ಇ-ಸ್ಕೂಟರ್‌ಗಳ ಮಾದರಿಯಲ್ಲಿ ರಚನೆ ಮಾಡಲಾಗಿಲ್ಲ. ಹಳೆಯ ಮಾದರಿಯಂತೆ ಹ್ಯಾಲೋಜೆನ್‌ ಲೈಟ್‌ಗಳನ್ನು ಬಳಕೆ ಮಾಡಲಾಗಿದೆ. 

ಬ್ಯಾಟರಿ ಹಾಗೂ ಮೋಟರ್‌ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲದಿದ್ದರೂ, ಇದು ಒಮ್ಮೆ ಚಾರ್ಜ್‌ ಮಾಡಿದರೆ 100 ಕಿ.ಮೀ. ದೂರ ಓಡಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಹೊಸ ಲೂನಾ ಸ್ಕೂಟರ್‌, ಟೆಲಿಸ್ಕೋಪಿಕ್‌ ಫೋರ್ಕ್ಸ್‌, ಡ್ಯುಯೆಲ್‌ ಶಾಕ್ಸ್‌, ಸ್ಪೋಕ್ಸ್‌ ವೀಲ್ ಮತ್ತು ಡ್ರಮ್‌ ಬ್ರೇಕ್‌ಗಳನ್ನು ಹೊಂದಿದೆ.