ಸಾರಾಂಶ
ತೆರಿಗೆ ಮರು ಪರಿಶೀಲನೆಯ ಕಾಂಗ್ರೆಸ್ ಅರ್ಜಿ ಹೈಕೋರ್ಟಲ್ಲೂ ವಜಾ ಆಗಿದೆ. ಐಟಿ ರಿಟರ್ನ್ ಫೈಲ್‌ನಲ್ಲಿ ವಂಚನೆ ಪ್ರಕರಣದ ಸಂಬಂಧ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.
ನವದೆಹಲಿ: ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಇಲಾಖೆಯಿಂದ ಮರುಪರಿಶೀಲನೆ ಮಾಡುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಆದೇಶ ನೀಡಿದ ನ್ಯಾ. ಯಶ್ವಂತ್ ಶರ್ಮಾ ನೇತೃತ್ವದ ಪೀಠ, ‘ಕಾಂಗ್ರೆಸ್ ಪಕ್ಷದ ರಿಟ್ ಅರ್ಜಿಗಳನ್ನು ವಜಾ ಮಾಡಲಾಗಿದೆ’ ಎಂದು ತಿಳಿಸಿತು.
ಏನಿದು ಪ್ರಕರಣ?
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಸಲ್ಲಿಕೆ ಮಾಡಲಾಗಿದ್ದ 2014-15 ರಿಂದ 2016-17ವರೆಗಿನ ಮೂರು ಆರ್ಥಿಕ ಸಾಲಿನ ವಾರ್ಷಿಕ ವರದಿಯನ್ನು ಮರುಪರಿಶೀಲನೆ ಮಾಡಲು ಪ್ರಾರಂಭ ಮಾಡಿತ್ತು.
ಆದರೆ ಕಾಂಗ್ರೆಸ್ ಪಕ್ಷದ ಪರ ವಾದ ಮಂಡಿಸಿದ್ದ ಖ್ಯಾತ ವಕೀಲ ಅಭಿಷೇಕ್ ಸಿಂಘ್ವಿ ಆದಾಯ ತೆರಿಗೆ ಇಲಾಖೆಯು 6 ಆರ್ಥಿಕ ಸಾಲಿಗಿಂತ ಹಿಂದಿನ ವಾರ್ಷಿಕ ವರದಿಯನ್ನು ಮರುಪರಿಶೀಲನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದರು. ಆದರೆ ಅವಕಾಶವಿದೆ ಎಂಬುದಾಗಿ ಆದಾಯ ತೆರಿಗೆ ಇಲಾಖೆ ವಾದಿಸುತ್ತಿತ್ತು.