ಮುಕೇಶ್‌ ಅಂಬಾನಿಗೆ ವಾಯ್ಸ್‌ ಡೇಟಾದಿಂದ ಜೀವಮಾನ ಸಾಧನೆ ಪ್ರಶಸ್ತಿ

| Published : Mar 23 2024, 01:01 AM IST / Updated: Mar 23 2024, 12:59 PM IST

ಮುಕೇಶ್‌ ಅಂಬಾನಿಗೆ ವಾಯ್ಸ್‌ ಡೇಟಾದಿಂದ ಜೀವಮಾನ ಸಾಧನೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಯೋಗೆ ಆರು ಪ್ರಶಸ್ತಿ ಲಭಿಸಿದ್ದು, ಮುಖ್ಯಸ್ಥ ಮುಕೇಶ್‌ ಅಂಬಾನಿಗೆ ಜೀವಮಾನ ಪ್ರಶಸ್ತಿ ಲಭಿಸಿದೆ.

ಮುಂಬೈ: ಭಾರತದ ದೂರಸಂಪರ್ಕ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಗಳನ್ನು ಪರಿಗಣಿಸಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಅವರಿಗೆ ವಾಯ್ಸ್‌ ಅಂಡ್‌ ಡೇಟಾ ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್‌ ಅವರಿಗೆ 2023ನೇ ಸಾಲಿನ ಪಾಥ್‌ ಬ್ರೇಕರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ಸಮಾರಂಭದಲ್ಲಿ ಮೂಲಸೌಕರ್ಯ, ಬಹುಭಾಷೆ, ಸಂವಹನ ವೇದಿಕೆ, ವ್ಯಾಪಾರ ಪ್ರಕ್ರಿಯೆ ನಾವೀನ್ಯತೆ, ನೆಟ್‌ವರ್ಕ್ ಸೇವೆಗಳು ಮತ್ತು ಐಒಟಿ ವಿಭಾಗಗಳಲ್ಲಿ ಜಿಯೋ ಆರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.