ಸಾರಾಂಶ
ಮಧ್ಯಂತರ ಬಜೆಟ್ ನಡೆದ ದಿನ ಭಾರತೀಯ ಷೇರುಪೇಟೆಯು ಅಲ್ಪ ಪ್ರಮಾಣದ ಕುಸಿತ ಕಂಡಿದೆ.
ಮುಂಬೈ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ದಿನ ಭಾರತದ ಷೇರು ಮಾರುಕಟ್ಟೆ ಪತನ ಕಂಡಿದೆ. ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲದ ಕಾರಣ ಸೆನ್ಸೆಕ್ಸ್ ಹಾಗೂ ನಿಫ್ಟಿ ಹಾಗೂ ನಿಫ್ಟಿ ಇಳಿಕೆ ಹಾದಿ ಹಿಡಿದಿದೆ.
ಬಾಂಬೆ ಸಂವೇದಿ ಸೂಚ್ಯಂಕ 106.81 ಅಂಕ ಕುಸಿತದೊಂದಿಗೆ 71,645.30 ಅಂಕಕ್ಕೆ ತೃಪ್ತಿಪಟ್ಟಿತು. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 28.25 ಅಂಕ ಕುಸಿತದೊಂದಿಗೆ 21,697.45ಕ್ಕೆ ತಲುಪಿತು. ಸೆನ್ಸೆಕ್ಸ್‌ನಿಂದ ಮಾರುತಿ, ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಎಸ್‌ಬಿಐ ಲಾಭ ಗಳಿಸಿದವು. ಎಲ್&ಟಿ, ಅಲ್ಟ್ರಾಟೆಕ್, ಜೆಎಸ್‌ಡಬ್ಲೂ ನಷ್ಟ ಕಂಡವು.