ಸಾರಾಂಶ
ಗ್ರಾಮೀಣ ಭಾರತದ ಸಾಮಾಜಿಕ ಮತ್ತು ಆರ್ಥಿಕತೆಯನ್ನು ಮಾರ್ಪಡಿಸುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಮತ್ತಷ್ಟು ಅಭಿವೃದ್ಧಿಗಾಗಿ ಪೂರಕ ವ್ಯವಸ್ಥೆ ರೂಪಿಸುವ ಘೋಷಣೆಯನ್ನು ಮಾಡಲಾಗಿದೆ.
ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರು ವಾರ್ಷಿಕ ಕನಿಷ್ಠ 1 ಲಕ್ಷ ರು. ಗಳಿಕೆ ಮಾಡುವ ಅವಕಾಶ ಒದಗಿಸಲು ತೀರ್ಮಾನಿಸಲಾಗಿದೆ.
83 ಲಕ್ಷ ಸ್ವಸಹಾಯ ಗುಂಪುಗಳಿಂದ ಸುಮಾರು 9 ಕೋಟಿ ಮಹಿಳೆಯರು ಗ್ರಾಮೀಣ ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ವ ಉದ್ಯೋಗದ ಮೂಲಕ ಮಾರ್ಪಡಿಸುತ್ತಿದ್ದಾರೆ.
ಈಗಾಗಲೇ 1 ಕೋಟಿ ಮಹಿಳೆಯರು ‘ಲಕ್‌ಪತಿ ದೀದಿ’ಗಳಾಗಿದ್ದು, ಇವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಸಂಖ್ಯೆಯನ್ನು 2ರಿಂದ 3 ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್‌ಪತಿ ದೀದಿ’ ಯೋಜನೆಯನ್ನು ಘೋಷಣೆ ಮಾಡಿದ್ದರು.
ಇದು ದೇಶದ ಗ್ರಾಮೀಣ ಪ್ರದೇಶದಲ್ಲಿರುವ 2 ಕೋಟಿ ಮಹಿಳೆಯರಿಗೆ ಉದ್ಯೋಗ ಮಾಡಲು ಬೇಕಾದ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
ಪ್ಲಂಬಿಗ್, ಎಲ್‌ಇಡಿ ಬಲ್ಬ್ ತಯಾರಿಕೆ ಮತ್ತು ಡ್ರೋನ್ ನಿರ್ವಹಣೆ ಮತ್ತು ರಿಪೇರಿಯನ್ನು ಕಲಿಸಲಾಗುತ್ತದೆ.