ಸಾರಾಂಶ
ಭಾರತದಲ್ಲಿ ಇದುವರೆಗೂ ಯಾವುದೇ ದೊಡ್ಡ ಮಟ್ಟದ ದುಷ್ಕೃತ್ಯ ನಡೆಸುವಲ್ಲಿ ವಿಫಲವಾಗಿದ್ದರೂ, ಭಾರತದಲ್ಲಿನ ತನ್ನ ಸೂತ್ರಧಾರರ ಮೂಲಕ ‘ಒಂಟಿ ತೋಳ ದಾಳಿಕೋರರ’ ನೇಮಕಕ್ಕೆ ಐಸಿಸ್ ಉಗ್ರ ಸಂಘಟನೆ ಯತ್ನ ನಡೆಸುತ್ತಿದೆ ಎಂದು ವಿಶ್ವಸಂಸ್ಥೆ ವರದಿ ಎಚ್ಚರಿಸಿದೆ.
ವಿಶ್ವಸಂಸ್ಥೆ: ಭಾರತದಲ್ಲಿ ಇದುವರೆಗೂ ಯಾವುದೇ ದೊಡ್ಡ ಮಟ್ಟದ ದುಷ್ಕೃತ್ಯ ನಡೆಸುವಲ್ಲಿ ವಿಫಲವಾಗಿದ್ದರೂ, ಭಾರತದಲ್ಲಿನ ತನ್ನ ಸೂತ್ರಧಾರರ ಮೂಲಕ ‘ಒಂಟಿ ತೋಳ ದಾಳಿಕೋರರ’ ನೇಮಕಕ್ಕೆ ಐಸಿಸ್ ಉಗ್ರ ಸಂಘಟನೆ ಯತ್ನ ನಡೆಸುತ್ತಿದೆ ಎಂದು ವಿಶ್ವಸಂಸ್ಥೆ ವರದಿ ಎಚ್ಚರಿಸಿದೆ.
ಐಸಿಸ್ ಮತ್ತು ಅಲ್‌ಖೈದಾ ಉಗ್ರ ಸಂಘಟನೆಗಳ ಕಾರ್ಯಾಚರಣೆ ಮೇಲೆ ನಿಗಾ ಇಡುವ ವಿಶ್ವಸಂಸ್ಥೆ ಕಣ್ಗಾವಲು ಸಂಸ್ಥೆಯೊಂದು ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಈ ಮಾಹಿತಿಯನ್ನು ನೀಡಿದೆ.
ಐಸಿಸ್ ಉಗ್ರ ಸಂಘಟನೆ ಇದುವರೆಗೂ ಭಾರತದಲ್ಲಿ ಯಾವುದೇ ದೊಡ್ಡ ಮಟ್ಟದ ದಾಳಿ ನಡೆಸುವಲ್ಲಿ ಸಫಲವಾಗಿಲ್ಲ. ಆದರೂ ತನ್ನ ವಿವಿಧ ಕಾರ್ಯಾಚರಣೆಗೆ ಅಗತ್ಯವಾದ ದಾಳಿಕೋರರನ್ನು ಅದು ಭಾರತದಲ್ಲಿನ ತನ್ನ ಹ್ಯಾಂಡ್ಲರ್‌ಗಳ ಮೂಲಕ ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.
ಅಲ್ಲದೆ ಭಾರತಕ್ಕಾಗಿ ತನ್ನ ಕಾರ್ಯತಂತ್ರ ಮತ್ತು ಹಿಂದೂ- ಮುಸ್ಲಿಂ ವಿರೋಧಾಭಾಸಗಳ ಕುರಿತು ಉಗ್ರ ಸಂಘಟನೆ ಉರ್ದು ಭಾಷೆಯಲ್ಲಿ ಪುಸ್ತಕ ಬಿಡುಗಡೆ ಮಾಡಿದೆ ಎಂದು ವರದಿ ಹೇಳಿದೆ.