ಶುಕ್ರವಾರದ ಮತದಾನ ದಿನ ಬದಲಿಗೆ ಮುಸ್ಲಿಂ ಲೀಗ್‌ ಆಗ್ರಹ

| Published : Mar 18 2024, 01:46 AM IST

ಸಾರಾಂಶ

ಮುಸ್ಲಿಮರಿಗೆ ಶುಕ್ರವಾರ ಪ್ರಾರ್ಥನಾ ದಿನವಾದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ಮತದಾನದ ದಿನವನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ಲೀಗ್‌ ಚಿಂತಿಸುತ್ತಿದೆ.

ಕಲ್ಲಿಕೋಟೆ: ಮುಸ್ಲಿಮರಿಗೆ ಶುಕ್ರವಾರ ಪ್ರಾರ್ಥನಾ ದಿನವಾದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ಮತದಾನದ ದಿನವನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ಲೀಗ್‌ ಚಿಂತಿಸುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಕಾರ್ಯದರ್ಶಿ ಸಲಾಂ, ‘ಶುಕ್ರವಾರದಂದು ಮುಸ್ಲಿಮರು ಮಸೀದಿಯಲ್ಲಿ ಗುಂಪಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಶುಕ್ರವಾರದಂದೇ ಮತದಾನ ನಿಗದಿ ಮಾಡಿರುವುದರಿಂದ ಮತದಾರರಿಗೂ ಸೇರಿದಂತೆ ಚುನಾವಣಾ ಸಿಬ್ಬಂದಿ ಮತ್ತು ಅಭ್ಯರ್ಥಿ-ಕಾರ್ಯಕರ್ತರಿಗೂ ಅನಾನುಕೂಲ ಉಂಟಾಗುತ್ತದೆ.

ಈ ಹಿನ್ನೆಲೆಯಲ್ಲಿ ಏ.19 ಮತ್ತು 26 ರಂದು ನಿಗದಿಮಾಡಿರುವ ದಿನಾಂಕವನ್ನು ಬದಲಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.