ಸಾರಾಂಶ
ಪಿಟಿಐ ನವದೆಹಲಿ
ದಿಲ್ಲಿ ಅಬಕಾರಿ ಹಗರಣದ 8 ಸಮನ್ಸ್‌ಗಳಿಗೆ ಗೈರಾದ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಿಲ್ಲಿ ಜಲಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ 2 ಹೊಸ ಸಮನ್ಸ್ ಜಾರಿ ಮಾಡಿದೆ.ಈ ವಿಷಯವನ್ನು ಆಪ್ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಷಿ ಬಹಿರಂಗಪಡಿಸಿದ್ದು, ಇದು ಯಾವ ಪ್ರಕರಣ ಎಂದೇ ಗೊತ್ತಿಲ್ಲ. ಒಟ್ಟಿನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುವ ಉದ್ದೇಶ ಮಾತ್ರ ಇ.ಡಿ.ಗೆ ಇದೆ. ಅದಕ್ಕೆಂದೇ ಸಮನ್ಸ್ ಜಾರಿ ಮಾಡಲಾಗಿದೆ ಎಂದು ದೂರಿದ್ದಾರೆ. ಆದರೆ ಈ ಸಮನ್ಸ್ ಬಗ್ಗೆ ಇ.ಡಿ. ಆಗಲಿ ಅಥವಾ ಸಿಬಿಐ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಏನಿದು ಜಲಮಂಡಳಿ ಹಗರಣದೆಹಲಿಯ ಜಲಮಂಡಳಿಯು, ಕೆಲ ಉಪಕರಣ ಅಳವಡಿಕೆ ಗುತ್ತಿಗೆಯನ್ನು ಎನ್‌ಕೆಜಿ ಎಂಬ ಕಂಪನಿಗೆ ವಹಿಸಿತ್ತು. ಈ ಕಂಪನಿಗೆ ಗುತ್ತಿಗೆ ಸಿಗುವ ರೀತಿಯಲ್ಲೇ ನಿಯಮ ರೂಪಿಸಲಾಗಿತ್ತು. ಜೊತೆಗೆ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಲಂಚ ಸ್ವೀಕರಿಸುವ ಸಲುವಾಗಿ ಗುತ್ತಿಗೆ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದ ಜಲಮಂಡಳಿ ಎಂಜಿನಿಯರ್ ಜಗದೀಶ್ ಕುಮಾರ್, ಈ ಹಣವನ್ನು ಆಪ್‌ಆದ್ಮಿಕ್ಕೆ ನೀಡಿದ್ದಾರೆ. ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು 2022ರಲ್ಲಿ ಸಿಬಿಐ ಕೇಸು ದಾಖಲಿಸಿತ್ತು. ಅದರ ಆಧಾರದಲ್ಲಿ ಇ.ಡಿ. ಕೂಡಾ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿ ತನಿಖೆ ಕೈಗೊಂಡಿದೆ.