2018-19ರ ಚುನಾವಣಾಬಾಂಡ್‌ ಖರೀದಿ ವಿವರ ಕೋರಿ ಸುಪ್ರಿಂಗೆ ಅರ್ಜಿ

| Published : Mar 18 2024, 01:46 AM IST

2018-19ರ ಚುನಾವಣಾಬಾಂಡ್‌ ಖರೀದಿ ವಿವರ ಕೋರಿ ಸುಪ್ರಿಂಗೆ ಅರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

2018ರ ಮಾ.1ರಿಮದ 2019ರ ಏಪ್ರಿಲ್‌ವರೆಗೂ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನೂ ಬಹಿರಂಗಪಡಿಸುವಂತೆ ಸಿಟಿಜನ್‌ ರೈಟ್ಸ್‌ ಟ್ರಸ್ಟ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ನವದೆಹಲಿ: 2018ರ ಮಾ.1ರಿಮದ 2019ರ ಏಪ್ರಿಲ್‌ವರೆಗೂ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನೂ ಬಹಿರಂಗಪಡಿಸುವಂತೆ ಸಿಟಿಜನ್‌ ರೈಟ್ಸ್‌ ಟ್ರಸ್ಟ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ಸಲ್ಲಿಸಿರುವ ಮಾಹಿತಿಯಲ್ಲಿ ಮೇಲ್ಕಂಡ ಅವಧಿಯ ಮಾಹಿತಿ ಸೇರಿಲ್ಲ. ಈ ಅವಧಿಯಲ್ಲಿ 4,002 ಕೋಟಿ ಮೌಲ್ಯದ 9,152 ಬಾಂಡ್‌ಗಳು ಮಾರಾಟವಾಗಿದ್ದು, ಇವುಗಳ ವಿವಿರಗಳನ್ನು ಬಹಿರಂಗ ಪಡಿಸುವಂತೆ ಟ್ರಸ್ಟ್‌ ನ್ಯಾಯಾಲಯವನ್ನು ಕೋರಿದೆ.