ಸಾರಾಂಶ
ಲಖನೌ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಅವರು ಬುಧವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಬಳಿಕ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಇದರೊಂದಿಗೆ ಕಾಂಗ್ರೆಸ್ಸಿಗರು ಬಿಜೆಪಿ ಹಾಗೂ ಎನ್‌ಡಿಎ ಕೂಟದ ಅಂಗಪಕ್ಷಗಳಿಗೆ ಹೋಗುವ ವಲಸೆ ಮುಂದುವರಿದಿದೆ.
ಕಾಂಗ್ರೆಸ್‌ನಲ್ಲಿ ಪ್ರಾಥಮಿಕ ಸದಸ್ಯರಾಗಿದ್ದ ವಿಭಾಕರ್ ಬುಧವಾರ ದಿಢೀರನೇ ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ ಹಾಗೂ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ‘ನಾನು ಈ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ವಂದನೆಗಳು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಸಾಲಿನ ಪತ್ರ ಬರೆದಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
ಬಿಜೆಪಿ ಸೇರಲು ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಶಾಸಕರ ನಿರ್ಧಾರ
ಗೌತಮಿ: ಅಸ್ಸಾಂ ಕಾಂಗ್ರೆಸ್ ಶಾಸಕರಾದ ಕಮಲಾಖ್ಯ ಡೇ ಪುರ್ಕಾಯಸ್ಥ ಮತ್ತು ಮಾಜಿ ಸಚಿವ ಬಸಂತ ದಾಸ್ಬಿ ಬಿಜೆಪಿ ಸರ್ಕಾರ ಸೇರಲು ನಿರ್ಧರಿಸಿದ್ದಾರೆ.
ಈ ಇಬ್ಬರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿಧಾನಸಭೆಯಲ್ಲಿನ ತಮ್ಮ ಕೊಠಡಿಯಲ್ಲಿ ಇಬ್ಬರೂ ಶಾಸಕರನ್ನು ಸ್ವಾಗತಿಸಿದರು. ಈ ಬಗ್ಗೆ ಮಾತನಾಡಿದ ಶರ್ಮಾ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಕಾರ್ಯಕ್ರಮಗಳು, ನಿರ್ಮಾಣ ಕೆಲಸಗಳಿಂದ ಪ್ರಭಾವಿತರಾಗಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ಬೆಂಬಲ ನೀಡಲು ಶಾಸಕರು ನಿರ್ಧರಿಸಿದ್ದಾರೆ’ ಎಂದರು.
ಆದರೆ ಇಬ್ಬರೂ ಶಾಸಕರು ಸದ್ಯಕ್ಕೆ ಕಾಂಗ್ರೆಸ್ ಶಾಸಕರಾಗಿಯೇ ಮುಂದುವರೆಯಲಿದ್ದು, ಬಿಜೆಪಿ ಸರ್ಕಾರಕ್ಕೆ ಬೇಷರತ್ ಬೆಂಬಲದ ಘೋಷಣೆ ಮಾಡಿದ್ದಾರೆ’ ಎಂದರು. ಇಬ್ಬರೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅಧಿಕೃತ ಬಿಜೆಪಿ ಸೇರುವ ಸಾಧ್ಯತೆ ಇದೆ.