ಸಾರಾಂಶ
ಮೇಘಸ್ಫೋಟ, ಹಠಾತ್ ಪ್ರವಾಹ, ಭೂಕುಸಿತಗಳಂತಹ ಹಲವು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿ ನಲುಗಿರುವ ಉತ್ತರಾಖಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪರಿಹಾರವಾಗಿ ರಾಜ್ಯಕ್ಕೆ 1200 ಕೋಟಿ ರು. ಘೋಷಿಸಿದ್ದಾರೆ.
- ₹1200 ಕೋಟಿ ಪರಿಹಾರ ಘೋಷಣೆ
ಪಿಟಿಐ ಡೆಹ್ರಾಡೂನ್ಮೇಘಸ್ಫೋಟ, ಹಠಾತ್ ಪ್ರವಾಹ, ಭೂಕುಸಿತಗಳಂತಹ ಹಲವು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿ ನಲುಗಿರುವ ಉತ್ತರಾಖಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪರಿಹಾರವಾಗಿ ರಾಜ್ಯಕ್ಕೆ 1200 ಕೋಟಿ ರು. ಘೋಷಿಸಿದ್ದಾರೆ. ಉತ್ತರಾಖಂಡಕ್ಕೆ ಬಂದಿಳಿದ ಅವರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜಾಲಿಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಪ್ರಧಾನಿ ಮೋದಿಯವರು ಸಂತ್ರಸ್ತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನೂ ನಡೆಸಿದರು. ಬಳಿಕ ಪರಿಹಾರ ಘೋಷಿಸಿದ್ದಾರೆ. ಪಿಎಂ ಆವಾಸ್ ಯೋಜನೆಯಡಿ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಮಂಗಳವಾರವಷ್ಟೇ ಮೋದಿ ಪ್ರವಾಹಪೀಡಿತ ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಹಿಮಾಚಲಕ್ಕೆ 15 ಸಾವಿರ ಕೋಟಿ ರು., ಹಾಗೂ ಪಂಜಾಬ್‌ಗೆ 16 ಸಾವಿರ ಕೋಟಿ ರು. ಘೋಷಿಸಿದ್ದರು.