ಹಿಂದಿಯ ಜನಪ್ರಿಯ ಗಾಯನ ಸ್ಪರ್ಧೆ ಇಂಡಿಯನ್‌ ಐಡಲ್‌ 3ನೇ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಾಂತ್‌ ತಮಂಗ್‌ (43) ಅವರು ಹೃದಯಸ್ತಂಭನದಿಂದ ಭಾನುವಾರ ನಿಧನರಾಗಿದ್ದಾರೆ.

ನವದೆಹಲಿ: ಹಿಂದಿಯ ಜನಪ್ರಿಯ ಗಾಯನ ಸ್ಪರ್ಧೆ ಇಂಡಿಯನ್‌ ಐಡಲ್‌ 3ನೇ ಆವೃತ್ತಿಯಲ್ಲಿ ಗೆದ್ದಿದ್ದ ಪ್ರಶಾಂತ್‌ ತಮಂಗ್‌ (43) ಅವರು ಹೃದಯಸ್ತಂಭನದಿಂದ ಭಾನುವಾರ ನಿಧನರಾಗಿದ್ದಾರೆ.

2007ರಲ್ಲಿ ಕೋಲ್ಕತಾ ಪೊಲೀಸ್‌ನಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್‌ ಅವರು ಇಂಡಿಯನ್‌ ಐಡಲ್‌ 3 ಸ್ಪರ್ಧೆಗೆ ಆಯ್ಕೆಯಾಗಿ, ಗೆದ್ದಿದ್ದರು. ಗೆಲುವಿನ ಬಳಿಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಕೆಲ ವರ್ಷಗಳಿಂದ ದೆಹಲಿಯಲ್ಲಿ ವಾಸವಿದ್ದ ತಮಂಗ್‌ ಅವರು ಗಾಯನದ ಜೊತೆ ಜೊತೆಗೆ ನಟನೆಯಲ್ಲಿಯೂ ತೊಡಗಿದಿಕೊಂಡಿದ್ದರು. ಭಾನುವಾರ ಬೆಳಗ್ಗೆ ಹೃದಯಾಸ್ತಂಭನದಿಂದ ಅಸುನೀಗಿದ್ದಾರೆ ಎಂದು ಅವರ ಸ್ನೇಹಿತರು ದೃಢಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಂಬನಿ ಮಿಡಿದಿದ್ದಾರೆ.