ಸಾರಾಂಶ
ಸೆ.24ರಂದು ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆ ನಡೆಯಲಿದೆ. ಮತಗಳ್ಳತನ ಆರೋಪ, ಮತಪಟ್ಟಿ ಪರಿಷ್ಕರಣೆ ವಿರೋಧದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಎನ್‌ಡಿಎ ವಿರುದ್ಧ ಕೈ ನಾಯಕರು ಯಾವ ರಣತಂತ್ರ ಹೂಡಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲ ಮೂಡಿಸಿದೆ.
ಮತಗಳವು, ಮತಪಟ್ಟಿ ಪರಿಷ್ಕರಣೆ ಚರ್ಚೆ ಸಂಭವ
ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರಣನೀತಿ ನಿರೀಕ್ಷೆಪಟನಾ: ಸೆ.24ರಂದು ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆ ನಡೆಯಲಿದೆ. ಮತಗಳ್ಳತನ ಆರೋಪ, ಮತಪಟ್ಟಿ ಪರಿಷ್ಕರಣೆ ವಿರೋಧದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಎನ್‌ಡಿಎ ವಿರುದ್ಧ ಕೈ ನಾಯಕರು ಯಾವ ರಣತಂತ್ರ ಹೂಡಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲ ಮೂಡಿಸಿದೆ.ಇದಲ್ಲದೆ, ಬಿಹಾರದಲ್ಲಿ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯಲಿದ್ದು. ಅಧಿಕಾರಕ್ಕೆ ಬರಲು ರಣನೀತಿ ರೂಪಿಸುವ ನಿರೀಕ್ಷೆ ಇದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅವರ ಜತೆಗೆ ಸಿಡಬ್ಲುಸಿ ಎಲ್ಲ ಸದಸ್ಯರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುವ ಸಾಧ್ಯತೆಯಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಕೂಡ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭಾಗಿಯಾಗಲಿದ್ದಾರೆ.ಈ ಬಗ್ಗೆ ಬಿಹಾರ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲಾವುರು ಮಾಹಿತಿ ನೀಡಿದ್ದು, ‘ಬಿಹಾರದಲ್ಲಿ ಇನ್ನೇನು ಚುನಾವಣೆನಡೆಯಲಿದ್ದು, ಇಲ್ಲಿ ಮತ ಅಧಿಕಾರ ಯಾತ್ರೆಯ ಮೂಲಕ ಕಾಂಗ್ರೆಸ್ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದೆ. ಹೀಗಾಗಿ ಇದೇ ರಾಜ್ಯದಲ್ಲಿ ಸಿಡಬ್ಲ್ಯೂಸಿ ಸಭೆ ಆಯೋಜಿಸಲಾಗಿದೆ’ ಎಂದರು.
;Resize=(128,128))
;Resize=(128,128))
;Resize=(128,128))