ಸಾರಾಂಶ
ಹಿಮಾಚಲದ ಆರು ಶಾಸಕರ ಅನರ್ಹತೆಯನ್ನು ತೆರವು ಮಾಡಲು ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದೆ.
ನವದೆಹಲಿ: ಪಕ್ಷದ ವಿಪ್ ಉಲ್ಲಂಘಿಸಿದ ಕಾರಣಕ್ಕೆ ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್‌ರಿಂದ ಅನರ್ಹತೆಗೆ ಒಳಗಾಗಿದ್ದ ಕಾಂಗ್ರೆಸ್‌ನ 6 ಶಾಸಕರ ಅನರ್ಹತೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಸಂದೇಶ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ‘ಅನರ್ಹತೆ ಮಾಡಿದ ಕುರಿತು ಸ್ಪೀಕರ್‌ಗೆ ನೋಟಿಸ್ ನೀಡಬಹುದೇ ಹೊರತು ಅನರ್ಹತೆಗೆ ತಡೆ ನೀಡಲು ನಮಗೆ ಅಧಿಕಾರವಿಲ್ಲ.ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿರುವ ಕುರಿತು ಪರಿಶೀಲಿಸುವ ಅಗತ್ಯವಿದ್ದು, ಒಂದು ವಾರದೊಳಗೆ ಅದರ ಕುರಿತಾಗಿ ಒಂದು ಮೆಮೊ ಸಲ್ಲಿಸಿ’ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ತಿಳಿಸಿ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿತು.
ಹಿಮಾಚಲ ಪ್ರದೇಶದ ಶಾಸಕರು ಅನರ್ಹರಾಗಿರುವ ಹಿನ್ನೆಲೆಯಲ್ಲಿ ತೆರವಾಗಿದ್ದ ಆರು ಕ್ಷೇತ್ರಗಳಿಗೆ ಜೂ.1ರಂದು ಉಪಚುನಾವಣೆ ಘೋಷಣೆಯಾಗಿದೆ.