ಸಾರಾಂಶ
ಒಂದು ವೇಳೆ ಉಕ್ರೇನ್ ಯುದ್ಧಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶ ಮಾಡಿದರೆ ಅದು 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕೋ: ಒಂದು ವೇಳೆ ಉಕ್ರೇನ್ ಯುದ್ಧಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶ ಮಾಡಿದರೆ ಅದು 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಅಧ್ಯಕ್ಷರಾಗಿ ಪುನರಾಯ್ಕೆ ಬಳಿಕ ಮಾಡಿದ ವಿಜಯ ಭಾಷಣದಲ್ಲಿ ‘ಉಕ್ರೇನ್ ಯುದ್ಧದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶಿಸಿದಲ್ಲಿ ದ್ವಿಪಕ್ಷೀಯ ಯುದ್ಧ ವಿಶ್ವಯುದ್ಧವಾಗಿ ತಿರುಗುವ ಸಾಧ್ಯತೆಗಳಿವೆ.
ಆದರೆ ಯಾರೇ ದಂಡೆತ್ತಿ ಬಂದರೂ ನಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಶಕ್ತಿ ನಮ್ಮ ಸೇನೆಗಿದೆ. ಇಂತಹ ಪರಿಸ್ಥಿತಿ ಬಾರದಿರಲಿ ಎಂದು ಎಲ್ಲ ವಿಶ್ವ ನಾಯಕರ ಆಶಯವಾಗಿದೆ’ ಎಂದು ಎಚ್ಚರಿಸಿದರು.