ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ಮತ್ತೆರಡು ಸಮೀಕ್ಷೆಗಳಿಂದ ಭವಿಷ್ಯ

| N/A | Published : Nov 13 2025, 06:11 AM IST

Bihar Election Exit Polls
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ಮತ್ತೆರಡು ಸಮೀಕ್ಷೆಗಳಿಂದ ಭವಿಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

 ದೇಶದ ಗಮನವನ್ನು ಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ನಾಳಿನ ಫಲಿತಾಂಶದತ್ತ ಕುತೂಹಲ ಮೂಡಿದೆ. ಈ ನಡುವೆ, ಎನ್‌ಡಿಎ ಒಕ್ಕೂಟ ಭರ್ಜರಿ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಆ್ಯಕ್ಸಿಸ್‌ ಮೈ ಇಂಡಿಯಾ ಹಾಗೂ ಟುಡೇಸ್‌ ಚಾಣಕ್ಯ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ 

ನವದೆಹಲಿ: ಕಳೆದೊಂದು ತಿಂಗಳಿನಿಂದ ದೇಶದ ಗಮನವನ್ನು ಸೆಳೆದಿದ್ದ ಬಿಹಾರ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ನಾಳಿನ ಫಲಿತಾಂಶದತ್ತ ಕುತೂಹಲ ಮೂಡಿದೆ. ಈ ನಡುವೆ, ಎನ್‌ಡಿಎ ಒಕ್ಕೂಟ ಭರ್ಜರಿ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಆ್ಯಕ್ಸಿಸ್‌ ಮೈ ಇಂಡಿಯಾ ಹಾಗೂ ಟುಡೇಸ್‌ ಚಾಣಕ್ಯ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಎನ್‌ಡಿಎಗೆ 121-141 ಹಾಗೂ ಮಹಾಘಟಬಂಧನಕ್ಕೆ 98-118 ಸ್ಥಾನಗಳಲ್ಲಿ ಜಯ

ಎನ್‌ಡಿಎಗೆ 121-141 ಹಾಗೂ ಮಹಾಘಟಬಂಧನಕ್ಕೆ 98-118 ಸ್ಥಾನಗಳಲ್ಲಿ ಜಯ ಸಿಗಲಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷಕ್ಕೆ 0-2 ಸ್ಥಾನಗಳು ಸಿಗಬಹುದು. ಆರ್‌ಜೆಡಿ 67-76 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಜೆಡಿಯುಗೆ 56-62, ಬಿಜೆಪಿಗೆ 50-56, ಕಾಂಗ್ರೆಸ್‌ಗೆ 17-21, ಮುಕೇಶ್‌ ಸಾಹ್ನಿಯವರ ವಿಕಾಸಶೀಲ ಇನ್ಸಾನ್‌ ಪಕ್ಷಕ್ಕೆ 3-5 ಹಾಗೂ ಎಡಪಕ್ಷಗಳಿಗೆ 10-14 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ಆ್ಯಕ್ಸಿಸ್‌ ಮೈ ಇಂಡಿಯಾ ನಡೆಸಿದ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಶೇ.44

ಇನ್ನು, ಎನ್‌ಡಿಎಗೆ 160, ಮಹಾಘಟಬಂಧನಕ್ಕೆ 77 (12 ಸ್ಥಾನಗಳು ಹೆಚ್ಚು ಕಡಿಮೆ) ಸ್ಥಾನಗಳಲ್ಲಿ ಜಯ ಸಿಗಲಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಶೇ.44 ಹಾಗೂ ಆರ್‌ಜೆಡಿ ಮತ್ತು ಮಿತ್ರಪಕ್ಷಗಳು ಶೇ.38 ಮತಪ್ರಮಾಣವನ್ನು ಪಡೆಯಲಿವೆ ಎಂದು ಟುಡೇಸ್‌ ಚಾಣಕ್ಯ ಅಂದಾಜಿಸಿದೆ

Read more Articles on