- ಭಾರತ ರಕ್ತದ ಹಣ ಸಂಪಾದಿಸುತ್ತಿದೆ ಎಂದಿದ್ದರು
- ಭಾರತದ ಮೇಲೆ ಶೇ.500 ತೆರಿಗೆಗೆ ಒತ್ತಾಯಿಸಿದ್ದ ಗ್ರಹಾಂವಾಷಿಂಗ್ಟನ್: ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ ಭಾರತಲವು ‘ರಕ್ತದ ಹಣ’ ಸಂಪಾದಿಸುತ್ತದೆ ಎಂದು ಆರೋಪಿಸಿದ್ದ ಹಾಗೂ ಇದಕ್ಕಾಗಿ ಭಾರತ, ಚೀನಾ ಮೇಲೆ ಶೇ.500ರಷ್ಟು ತೆರಿಗೆ ವಿಧಿಸಬೇಕೆಂದು ಪ್ರತಿಪಾದಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ, ರಿಪಬ್ಲಿಕ್ ಪಕ್ಷದ ಸೆನೆಟರ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ಭಾನುವಾರ ಅಸುನೀಗಿದ್ದಾರೆ.
‘ತೀರಾ ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ’ ಎಂದು ಅವರ ಕಚೇರಿ ಹೇಳಿದೆ. ಅವರ ಸಾವಿನ ಹಿಂದೆ ವಿಷಾಹಾರ ಉಣಿಸಿದ ಕೈವಾಡ ಇದೆಯೇ ಎಂಬ ಸಂದೇಹ ಕೂಡ ಇದೆ. ಆದರೆ ಯಾವುದೂ ದೃಢಪಟ್ಟಿಲ್ಲ.ಬಲಪಂಥೀಯ ರಿಪಬ್ಲಿಕನ್ ಪಕ್ಷದ ಪ್ರಭಾವಿ ನಾಯಕರಾಗಿದ್ದ ಗ್ರಹಾಂ ಅವರು ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಉಕ್ರೇನ್ ಪರ ಗಟ್ಟಿ ಧ್ವನಿಯಾಗಿ ನಿಂತಿದ್ದರು. ಇರಾನ್ ವಿರುದ್ಧ ಅಮೆರಿಕ ದಾಳಿ ಮಾಡಬೇಕೆಂದು ಹಿಂದಿನಿಂದಲೂ ವಾದಿಸುತ್ತಾ ಬಂದಿದ್ದರು. ಹಿಂದಿನ ಸರ್ಕಾರಾವಧಿಯಲ್ಲಿ ನಡೆದಿದ್ದ ಇರಾನ್-ಅಮೆರಿಕ ಪರಮಾಣು ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದವರು ಗ್ರಹಾಂ.
ಗಾಜಾ ಸಂಘರ್ಷದ ವಿಚಾರದಲ್ಲಿ ಇಸ್ರೇಲ್‌ಗೆ ಅಚಲ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದ ಗ್ರಹಾಂ ಅವರು, 2016ರಲ್ಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪ್ರಚಾರದ ವೇಳೆ ವಿರುದ್ಧವಾಗಿ ನಿಂತಿದ್ದರೂ ಮುಂದೆ ಟ್ರಂಪ್ ಅವರ ಆತ್ಮೀಯ ವಲಯದಲ್ಲಿ ಸೇರಿಕೊಂಡಿದ್ದರು.
ಟ್ರಂಪ್ ಶೋಕ:
ಗ್ರಹಾಂ ನಿಧನಕ್ಕೆ ಟ್ರಂಪ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ನಿಜವಾದ ದೇಶಭಕ್ತ. ನಾನು ಕಂಡ ಶ್ರೇಷ್ಠ ವ್ಯಕ್ತಿ, ಸೆನೆಟರ್ ಆಗಿದ್ದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.