ಹಳೆಯ ಮತದಾರರು ಮಾತ್ರವಲ್ಲ, ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಆಗ ಬಯಸುವವರೂ ತಮ್ಮ ತಂದೆ-ತಾಯಿಯ ಎಸ್‌ಐಆರ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಚುನಾವಣಾ ಆಯೋಗ ತಿಳಿಸಿದೆ.
ನವದೆಹಲಿ : ಹಳೆಯ ಮತದಾರರು ಮಾತ್ರವಲ್ಲ, ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಆಗ ಬಯಸುವವರೂ ತಮ್ಮ ತಂದೆ-ತಾಯಿಯ ಎಸ್‌ಐಆರ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪೋಷಕರ ಎಸ್‌ಐಆರ್ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ
ಬಿಹಾರದಲ್ಲಿ ಕಳೆದ ವರ್ಷ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಈ ಘೋಷಣೆ (ಡಿಕ್ಲರೇಷನ್) ಸೇರ್ಪಡೆ ಮಾಡಲಾಗಿತ್ತು. ಅದರ ಆಧಾರದ ಮೇಲೆ ಇದೀಗ,ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಿರುವ ಹೊಸ ಮತದಾರರು ಫಾರ್ಮ್ 6ರಲ್ಲಿ ತಮ್ಮ ಪೋಷಕರ ಎಸ್‌ಐಆರ್ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ, ಆಫ್‌ಲೈನ್ ಫಾರ್ಮ್ 6ನಲ್ಲಿ ಇದನ್ನು ಸೇರ್ಪಡೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇಲ್ಲದಿದ್ದರೆ ಫಾರ್ಮ್ ಸಬ್‌ಮಿಟ್ ಆಗುವುದಿಲ್ಲ
ಆನ್‌ಲೈನ್‌ನಲ್ಲಿ ಹೊಸ ಮತದಾರ ಆನ್‌ಲೈನ್‌ನಲ್ಲಿ ಫಾರ್ಮ್ 6 ಅನ್ನು ಭರ್ತಿ ಮಾಡುವಾಗ ಹೊಸದಾಗಿ ಸೇರ್ಪಡೆ ಮಾಡಲಾದ ಪಾಲಕರ ಎಸ್ಐಆರ್ ಘೋಷಣಾಪತ್ರವನ್ನೂ ಭರ್ತಿ ಮಾಡಬೇಕು. ಇಲ್ಲದಿದ್ದರೆ ಫಾರ್ಮ್ ಸಬ್‌ಮಿಟ್ ಆಗುವುದಿಲ್ಲ.
ಫಾರ್ಮ್6ರಲ್ಲಿ ಯಾವುದೇ ತಿದ್ದುಪಡಿ ಮಾಡದೆ ಹೊಸ ಘೋಷಣೆಯನ್ನು ಸೂಚನೆಗಳ ಮೂಲಕ ಸೇರ್ಪಡೆ ಮಾಡಲಾಗಿದೆ. ಇದು ಮತದಾರರ ಮ್ಯಾಪಿಂಗ್ ಅನುಕೂಲ ಮಾಡಿಕೊಡಲಿದೆ ಮತ್ತು ಅಪ್ಲಿಕೇಷನ್ ಜತೆಗೆ ಹೊಸ ಮತದಾರರು ಸಲ್ಲಿಸಬೇಕಿರುವ ದಾಖಲೆಗಳನ್ನೂ ಕಡಿಮೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
